ಫುಲ್ ಟೈಟಾಗಿ ಮದುವೆಯನ್ನೇ ಮರೆತ ವರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವರನೊಬ್ಬ ಕುಡಿದು ಟೈಟಾಗಿ ಮದುವೆಗೆ ಹಾಜರಾಗುವುದನ್ನೇ ಮರೆತ್ತಿದ್ದು ,  ಇದರಿಂದ ಆಕ್ರೋಶಗೊಂಡ ವಧುವಿನ ಕುಟುಂಬ ಸಂಬಂಧಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಭಾಗಲ್ಪುರದ ಸುಲ್ತಂಗಂಜ್ ಗ್ರಾಮದ ವರನೇ ತನ್ನ ಮದುವೆಗೆ ಹಾಜರಾಗಲು ಮರೆತ್ತಿರುವ ವ್ಯಕ್ತಿ.

ಆತ ಹಿಂದಿನ ರಾತ್ರಿ ಕುಡಿದು ಮಲಗಿದ್ದ. ವಧು ಮತ್ತು ಆಕೆಯ ಕುಟುಂಬದವರು ಮದುವೆಯ ಸ್ಥಳದಲ್ಲಿ ಕಾಯುತ್ತಿದ್ದರು, ಆದರೆ ವರನಿಗೆ ಎಚ್ಚರವಾಗದೇ ಮದುವೆಗೆ ಬಂದೇ ಇಲ್ಲ. ಮರುದಿನ ಅವನಿಗೆ ಪ್ರಜ್ಞೆ ಬಂದಿದೆ. ಕೂಡಲೇ ವಧುವಿನ ಮನೆಗೆ ಹೋಗಿದ್ದಾನೆ. ಆದರೆ ಅದು ತುಂಬಾ ತಡವಾಗಿತ್ತು.

ಆದರೆ ಮದುವೆಯನ್ನೇ ಮರೆಯುವಷ್ಟು ಕುಡಿಯುವ ವ್ಯಕ್ತಿಯೊಂದಿಗೆ ವಧು ಮದುವೆಯಾಗಲು ನಿರಾಕರಿಸಿದಳು. ವಧುವಿನ ಕುಟುಂಬದವರು ಮದುವೆಯ ವ್ಯವಸ್ಥೆಗಳಿಗೆ ಖರ್ಚು ಮಾಡಿದ ಎಲ್ಲಾ ಹಣವನ್ನು ಹಿಂದಿರುಗಿಸುವಂತೆ ವರನ ಕುಟುಂಬಕ್ಕೆ ಒತ್ತಾಯಿಸಿದ್ದಾರೆ. ಹಣ ಕೊಡದ ಕಾರಣ ವರನ ಕೆಲವು ಸಂಬಂಧಿಕರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡರು. ನಂತರ, ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಸರಿಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!