ದಿನಭವಿಷ್ಯ | ಇಂದು ಫಲಪ್ರದ ದಿನ, ನಿಮ್ಮ ಕಾರ್ಯವೈಖರಿ ಇತರರಿಗೂ ಪ್ರೇರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಫಲಪ್ರದ ದಿನ. ನಿಮ್ಮ ಕಾರ್ಯವೈಖರಿ ಇತರರಿಗೂ  ಪ್ರೇರಣೆ. ಕುಟುಂಬದಲ್ಲಿ ಅಭಿಪ್ರಾಯ ಹಂಚಿಕೆ ಯಿಂದ ಭಿನ್ನಮತ ನಿವಾರಣೆ.

ವೃಷಭ
ಕುಟುಂಬದಲ್ಲಿ ಸಣ್ಣಪುಟ್ಟ ವಾಗ್ವಾದ ಉಂಟಾದೀತು. ಅದನ್ನು ವಿಕೋಪಕ್ಕೆ ಕೊಂಡು ಹೋಗದಿರಿ.ಇತರರ ಮಾತು ಆಲಿಸುವ ಅಭ್ಯಾಸ ಬೆಳೆಸಿಕೊಳ್ಳಿ.

ಮಿಥುನ
ದಿನವಹಿ ಕಾರ್ಯದಿಂದ ಹೊರತಾದ ಕೆಲಸದಲ್ಲಿ ತೊಡಗುವಿರಿ. ಇದು ನಿಮಗೆ ಉಲ್ಲಾಸ ನೀಡಲಿದೆ. ಕಾಲೆಳೆಯುವವರ ಕುರಿತು ಎಚ್ಚರವಿರಲಿ.

ಕಟಕ
ಕೌಟುಂಬಿಕ ಶಾಂತಿ, ಸಮಾಧಾನ. ಆರ್ಥಿಕ ಪರಿಸ್ಥಿತಿ ನಿಭಾಯಿಸಲು ಬಲ್ಲವರ ಸಲಹೆ ಪಡೆಯಿರಿ. ಟೀಕಾಕಾರರನ್ನು ಅವಗಣಿಸಿರಿ.

ಸಿಂಹ
ಆರೋಗ್ಯದತ್ತ ಹೆಚ್ಚು ಗಮನ ಹರಿಸಿ. ನಿಮ್ಮ ಜೀವನಶೈಲಿ ಬದಲಿಸುವ ಅಗತ್ಯವೂ ಬಂದೀತು. ನೆರೆಕರೆ ಜತೆ ವಾಗ್ವಾದ ನಡದೀತು. ಸಹನೆಯಿಂದ ವರ್ತಿಸಿ.

ಕನ್ಯಾ
ನಿಮ್ಮ ಕಾರ್ಯವನ್ನು ಸಂತೋಷದಿಂದ ನಿರ್ವಹಿಸಿ. ಆಗ ನೋಡಿ, ಫಲಿತಾಂಶ. ಉದಾಸೀನತೆ  ಬಿಟ್ಟುಬಿಡಿ. ಕೌಟುಂಬಿಕ ಸಹಕಾರ. ಆರ್ಥಿಕ ಉನ್ನತಿ.

ತುಲಾ
ಪರಿಹಾರ ಕಷ್ಟ ಎಂದು ಭಾವಿಸಿದ್ದ ಸಮಸ್ಯೆ ಸುಲಭದಲ್ಲಿ ಪರಿಹಾರ ಕಾಣುವುದು. ಬಂಧುಗಳ ಜತೆಗಿನ ಸಂಬಂಧ ಕೆಡದಂತೆ ನೋಡಿಕೊಳ್ಳಿ.

ವೃಶ್ಚಿಕ
ಪ್ರಯಾಣದ ಉದ್ದೇಶ ಇದ್ದರೆ  ಎಲ್ಲ ವ್ಯವಸ್ಥೆ ಸರಿಯಾಗಿ ಮಾಡಿಕೊಳ್ಳಿ. ಇಲ್ಲವಾದರೆ ಸಮಸ್ಯೆಗೆ ಸಿಲುಕುವಿರಿ. ವೃತ್ತಿಯಲ್ಲಿ ಏರುಪೇರು. ಭಾವನಾತ್ಮಕ ಸಂಘರ್ಷ.

ಧನು
ಆರ್ಥಿಕ ಪರಿಸ್ಥಿತಿ ಕಷ್ಟಕರ ಎಂದೆನ್ನಿಸಬಹುದು. ಆದರೆ ಹತಾಶೆ ಬೇಡ, ಮುಂದಿನ ದಿನ ನಿಮಗೆ ಪೂರಕವಾಗಿದೆ. ಮನೆಯಲ್ಲಿ ಉತ್ತಮ ಸಹಕಾರ.

ಮಕರ
ಮಕ್ಕಳಿಂದ ಸಂತೋಷ. ಭಾವನಾತ್ಮಕ ನೋವಿಗೆ ಉಪಶಮನ. ವ್ಯಕ್ತಿಯೊಬ್ಬರ ನಡೆನುಡಿ ನಿಮಗೆ ಪ್ರೇರಣೆ ನೀಡಬಹುದು. ಆರ್ಥಿಕ ಸ್ಥಿತಿ ಸುಧಾರಣೆ.

ಕುಂಭ
ಕುಟುಂಬ ಸದಸ್ಯರು ನಿಮ್ಮ ಮೇಲೆ ಇಟ್ಟಿರುವ ನಿರೀಕ್ಷೆಗೆ ನಿರಾಶೆ ಮಾಡದಿರಿ. ಅವರ ಮಾತು ಧಿಕ್ಕರಿಸಬೇಡಿ. ಆರ್ಥಿಕ ಬಿಕ್ಕಟ್ಟು ಕಾಡಬಹುದು.

ಮೀನ
ಮನೆಯವರ ಜತೆ ಪ್ರಾಮಾಣಿಕವಾಗಿ ವರ್ತಿಸಿ. ಸೌಹಾರ್ದತೆ ಕಾಪಾಡಲು ವಾದ ಗಳಿಂದ ದೂರವಿರಿ. ನಿಮ್ಮ ಕೆಲಸದಲ್ಲಿ ಏಕಾಗ್ರತೆಯಿರಲಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!