ಮೇಷ
ಹೊಣೆಗಾರಿಕೆ ಹೆಚ್ಚು. ಸೂಕ್ತ ನೆರವು ಪಡೆಯಿರಿ. ಏಕಾಂಗಿಗಳಿಗೆ ವೈವಾಹಿಕ ಬಂಧ ತಕ್ಷಣ ಕೂಡಿಬರದು, ಕಾಯಬೇಕು.
ವೃಷಭ
ಪ್ರಗತಿಯ ದಿನ- ವೃತ್ತಿಯಲ್ಲೂ, ಖಾಸಗಿ ಬದುಕಲ್ಲೂ. ಪ್ರೀತಿಯಿಂದ ಸಂತೋಷ. ಹಣದ ವಿಚಾರದಲ್ಲಿ ಸಂತೃಪ್ತಿ. ವೃತ್ತಿ ಸಮಸ್ಯೆ ಪರಿಹಾರ.
ಮಿಥುನ
ಕುಟುಂಬ ಸದಸ್ಯರಿಂದ ಕೊಡುಗೆ ಪಡೆಯುವಿರಿ. ವೈವಾಹಿಕ ಸಂಬಂಧ ಕೂಡಿ ಬಂದೀತು. ಬಂಧುಗಳ ಸಹಕಾರ.
ಕಟಕ
ಆರ್ಥಿಕ ಪರಿಸ್ಥಿತಿ ಸ್ಥಿರ. ಆರೋಗ್ಯ ಸಮಸ್ಯೆ ನಿವಾರಣೆ. ವ್ಯಕ್ತಿಯೊಬ್ಬರ ಜತೆ ಆಪ್ತ ಸಂಬಂಧ ಕಾಯ್ದುಕೊಳ್ಳುವಿರಿ. ಕೌಟುಂಬಿಕ ಅಸಮಾಧಾನ.
ಸಿಂಹ
ಹಣದ ವಿಚಾರದಲ್ಲಿ ಅವಸರದ ನಿರ್ಧಾರ ಬೇಡ. ಸಹೋದ್ಯೋಗಿ ಜತೆ ಸಮಸ್ಯೆ. ತಾಳ್ಮೆಯ ನಡೆ ಅವಶ್ಯ. ದುಡುಕದಿರಿ. ಕೌಟುಂಬಿಕ ಸಹಕಾರ.
ಕನ್ಯಾ
ವೃತ್ತಿಯಲ್ಲಿ ಅಸಹಕಾರ. ಆಪ್ತರ ಜತೆ ಅಹಂಕಾರ ತ್ಯಜಿಸಿ. ವಿನಯವಿರಲಿ. ಹೆಚ್ಚುವರಿ ಖರ್ಚು ನಿಭಾಯಿಸಲು ಕಷ್ಟವಾದೀತು.
ತುಲಾ
ಸಾಧಾರಣ ಎನ್ನುವ ದಿನ. ದೊಡ್ಡ ಪ್ರಗತಿಯೂ ಇಲ್ಲ, ಹಿನ್ನಡೆಯೂ ಇಲ್ಲ. ಆತ್ಮೋದ್ಧಾರಕ್ಕೆ ಗಮನ ಕೊಡಿ. ಆಧ್ಯಾತ್ಮಿಕ ಚಿಂತನೆ ನಿಮ್ಮನ್ನು ಆಕರ್ಷಿಸಲಿದೆ.
ವೃಶ್ಚಿಕ
ಇತರರ ಜತೆ ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಲಿ. ಅದರಿಂದ ನಿಮಗೂ ಒಳಿತು. ಹಣದ ಹರಿವು ಉತ್ತಮ. ವ್ಯಯ ಕಡಿಮೆ.
ಧನು
ಆತ್ಮವಿಶ್ವಾಸ ಇಂದಿನ ಅಗತ್ಯ. ಅದರಿಂದ ಏನನ್ನೂ ಸಾಽಸಬಲ್ಲಿರಿ. ಸದ್ಯದಲ್ಲೆ ದೊಡ್ಡ ಲಾಭವೊಂದು ಸಿಗಲಿದೆ. ಆರೋಗ್ಯ ಸಮಸ್ಯೆ ಪರಿಹಾರ.
ಮಕರ
ಆರ್ಥಿಕ ಉನ್ನತಿ ತೃಪ್ತಿಕರ. ಆರೋಗ್ಯವೂ ಸುಸ್ಥಿರ. ಆತಂಕ ಪಟ್ಟಿದ್ದ ಪರಿಸ್ಥಿತಿಯೊಂದು ತಿಳಿಯಾಗಲಿದೆ. ಉದ್ವಿಗ್ನತೆ ಶಮನವಾಗಲಿದೆ.
ಕುಂಭ
ನಿಮ್ಮ ಪಾಲಿಗೆ ಶುಭ ದಿನ. ಹಲವು ಕ್ಷೇತ್ರಗಳಲ್ಲಿ ಒಳ್ಳೆಯ ಬೆಳವಣಿಗೆ. ಆತಂಕ ನಿವಾರಣೆ. ಮಾನಸಿಕ ನೆಮ್ಮದಿ. ಬಂಧುಗಳ ಸಹಕಾರ.
ಮೀನ
ಆತ್ಮೀಯರ ಜತೆ ಆಪ್ತವಾಗಿ ಕಾಲ ಕಳೆಯುವ ಅವಕಾಶ. ಆದಾಯದಲ್ಲಿ ಹೆಚ್ಚಳ. ಕಾಲಕಾಲಕ್ಕೆ ಆಹಾರ ಸೇವಿಸಲು ಮರೆಯದಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ