ದಿನಭವಿಷ್ಯ: ನಿಮ್ಮ ಕಠಿಣ ಪರಿಶ್ರಮವೇ ಇಂದು ನಿಮಗೆ ಭರ್ಜರಿ ಫಲಿತಾಂಶ ನೀಡುತ್ತದೆ

ಮೇಷ
ವ್ಯವಹಾರದಲ್ಲಿ  ಹೊಸ  ಅವಕಾಶ ಒದಗಿ ಬರಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಭವಿಷ್ಯದ ಕುರಿತಾದ ಅನಿಶ್ಚಿತತೆ ಕೊನೆಗೊಂಡೀತು.

ವೃಷಭ
ವೈಯಕ್ತಿಕ ಹಿತಾಸಕ್ತಿ ಈಡೇರಿಸಲು ಆದ್ಯತೆ ಕೊಡುತ್ತೀರಿ. ಕುಟುಂಬಸ್ಥರ ಹಿತಾಸಕ್ತಿ ಯನ್ನೂ ನೋಡಿಕೊಳ್ಳಿ.  ವೃತ್ತಿಯಲ್ಲಿ  ಪೈಪೋಟಿ ಎದುರಿಸುವಿರಿ.

ಮಿಥುನ
ಖಾಸಗಿ ಬದುಕಲ್ಲಿ ಸಮಸ್ಯೆ ಉಂಟಾಗಲಿದೆ. ಬಳಿಕ ತಾನೇತಾನಾಗಿ ಪರಿಹಾರವೂ ಕಾಣುವುದು.  ಇತರರಿಗೆ ನೆರವು ನೀಡಲು ಮನ ಮಾಡುತ್ತೀರಿ.

ಕಟಕ
ಆಪ್ತರ ಭಾವನೆಗಳನ್ನು ಗೌರವಿಸಿ.  ನಿಮ್ಮ ಅಭಿಪ್ರಾಯ ಇತರರ ಮನ ನೋಯಿಸದಂತೆ ನೋಡಿಕೊಳ್ಳಿ. ಕೌಟುಂಬಿಕ ಸಹಕಾರ ಪಡೆಯಿರಿ.

ಸಿಂಹ
ಕೌಟುಂಬಿಕ ಸಂಭ್ರಮಾಚರಣೆ. ಆದರೆ  ವೃತ್ತಿಯಲ್ಲಿ ಒತ್ತಡ ಅನುಭವಿಸುತ್ತೀರಿ. ಸಹೋದ್ಯೋಗಿಗಳ ಅಸಹಕಾರ. ಆರೋಗ್ಯ ಸಮಸ್ಯೆ.

ಕನ್ಯಾ
ನಿಮ್ಮ ಸಾಮರ್ಥ್ಯಕ್ಕೆ ನಿಲುಕದ ವಿಷಯದತ್ತ ಕೈಚಾಚದಿರಿ. ನಿರಾಶೆಯಾದೀತು.  ಆಪ್ತರೆನಿಸಿದವರೇ  ಇಂದು ನಿಮ್ಮಿಂದ ದೂರ ಸರಿಯಬಹುದು.

ತುಲಾ
ನಿಮ್ಮ ವರ್ತನೆಯಿಂದ ಕೆಲವರ ಮನ ನೋಯಿಸುವಿರಿ. ಸಂಬಂಧದಲ್ಲಿ ಏರುಪೇರು. ಆರೋಗ್ಯ ಸಮಸ್ಯೆ ಚಿಂತೆ ಕಾರಣವಾದೀತು.

ವೃಶ್ಚಿಕ
ನಿಮ್ಮ ಆಪ್ತರೊಡನೆ ಇತರರು ಸಲುಗೆ ಬೆಳೆಸಿಕೊಳ್ಳುವುದು ನಿಮಗೆ ಅಸಹನೀಯ ಎನಿಸಬಹುದು.  ಭಾವನಾತ್ಮಕ ತಳಮಳ.  ಸಹನೆ ಕಾಯ್ದುಕೊಳ್ಳಿ.

ಧನು
ಆಪ್ತರ ಜತೆ ಅಂತರಂಗದ ಭಾವನೆ  ಹಂಚಿಕೊಳ್ಳುವಾಗ ಎಚ್ಚರ ವಹಿಸಿ. ಕೆಲ ವಿಷಯ ಬಹಿರಂಗವಾದರೆ ಅದು ಸಮಸ್ಯೆ ಉಂಟು ಮಾಡಬಹುದು.

ಮಕರ
ಕಾರ್ಯದೊತ್ತಡ. ಬಂಧುಗಳಿಂದ ಕಿರಿಕಿರಿ.  ಕೌಟುಂಬಿಕ ಸಮಸ್ಯೆಗೆ ಇತರರಲ್ಲಿ  ಪರಿಹಾರ ಕೇಳಬೇಡಿ. ವೃತ್ತಿಯಲ್ಲಿ ಒತ್ತಡ ಹೆಚ್ಚು, ಹಿನ್ನಡೆ ಸಂಭವ.

ಕುಂಭ
ಕಾಲಮಿತಿಯಲ್ಲಿ  ಕಾರ್ಯ ಪೂರೈಸ ಬೇಕಾದ ಒತ್ತಡ.  ಮಿತ್ರರೇ ನಿಮ್ಮ ವಿರುದ್ಧ ತಿರುಗಿ ಬೀಳಬಹುದು. ಕೌಟುಂಬಿಕ ಒತ್ತಡ ಹೆಚ್ಚುವುದು.

ಮೀನ
ಮುನಿಸಿ ದೂರವಾಗಿದ್ದ  ಆಪ್ತರೊಂದಿಗೆ ಮತ್ತೆ ಸೇರಿಕೊಳ್ಳುತ್ತೀರಿ. ಅವರ ಸಂಗದಲ್ಲಿ ಸಂತೋಷ. ವದಂತಿ ಹರಡುವ ಜನರಿಂದ ದೂರವಿರಿ. ಆರ್ಥಿಕ ಒತ್ತಡ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!