Monday, August 8, 2022

Latest Posts

ಜಿ20 ಶೃಂಗಸಭೆ: ರೋಮ್​​ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಜಿ20 ಶೃಂಗಸಭೆಗಾಗಿ ಇಂದು  ರೋಮ್​​ಗೆ ಪ್ರಯಾಣ ಬೆಳೆಸಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ರೋಮ್ ತಲುಪಲಿದ್ದಾರೆ.

ಇನ್ನೊಂದು ವಿಶೇಷವೇನೆಂದರೆ  ಕಳೆದ 12 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ರೋಮ್​​ಗೆ ಭೇಟಿ ನೀಡುತ್ತಿರುವುದಾಗಿದೆ. ಈ ಹೆಮ್ಮೆಯ ಗರಿ ನರೇಂದ್ರ ಮೋದಿಯವರಿಗೆ ಸೇರಲಿದೆ.

ಬೆಳಗ್ಗೆ 10 ಗಂಟೆ ಸುಮಾರಿಗೆ ಪ್ರಧಾನಿ ರೋಮ್​ ತಲುಪಲಿದ್ದು, ಇಂದು ಮಧ್ಯಾಹ್ನ 3.30ಕ್ಕೆ ಅಲ್ಲಿರುವ ಗಾಂಧಿ ಪ್ರತಿಮೆ ಬಳಿ ತೆರಳಲಿದ್ದಾರೆ.  ನಂತರ ಸಂಜೆ 5.30ಕ್ಕೆ ಇಟಲಿಯ ಪ್ರಧಾನಿ ಮಾರಿಯೋ ಡ್ರಾಗಿ

ಎರಡು ದಿನಗಳ ಪ್ರವಾಸ ಇದಾಗಿದ್ದು, ಅಕ್ಟೋಬರ್​ 31ರವರೆಗೂ ಪ್ರಧಾನಿ ಅಲ್ಲಿಯೇ ಇರಲಿದ್ದಾರೆ. ಜಿ 20 ಶೃಂಗಸಭೆಯು ಇಟಲಿಯ ರೋಮ್‌ನಲ್ಲಿ ಅಕ್ಟೋಬರ್ 30 ಮತ್ತು 31 ರಂದು ನಡೆಯಲಿದೆ. ಹವಾಮಾನ ಬದಲಾವಣೆ, ಅಫ್ಘಾನಿಸ್ತಾನ ಮತ್ತು ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುವುದು ಸೇರಿದಂತೆ ಹಲವಾರು ವಿಷಯಗಳ ಮೇಲೆ ಚರ್ಚೆ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss