ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಮಡಿಕೇರಿ:
ಗಬ್ಬದ ಹಸುವೊಂದನ್ನು ಹತ್ಯೆ ಮಾಡಿರುವ ಘಟನೆ ಸಿದ್ದಾಪುರದ ಮಠ ಗ್ರಾಮದಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ಗೋವನ್ನು ಹತ್ಯೆ ಮಾಡಿ, ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಸಂದರ್ಭ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿರುವ ಬೆನ್ನಲ್ಲೇ ಇದೀಗ ಈ ಕೃತ್ಯ ನಡೆದಿರುವುದು ಹಿಂದೂ ಬಾಂಧವರನ್ನು ಕೆರಳಿಸಿದೆ.
ಮಠ ಗ್ರಾಮದ ಕ್ಷೇವಿಯರ್ ಎಂಬವರು ಗುಜರಾತ್ ನ ಗಿರ್ ತಳಿಯ ವಂಶಾಭಿವೃದ್ದಿಗಾಗಿ ಇರಿಸಿಕೊಂಡಿದ್ದ 60 ರಿಂದ 80 ಸಾವಿರ ರೂ. ಬೆಲೆಬಾಳುವ ಗಬ್ಬದ ಹಸುವನ್ನು ಕೊಟ್ಟಿಗೆಯಿಂದಲೇ ಕದ್ದೊಯ್ದು ಈ ಕೃತ್ಯ ನಡೆಸಲಾಗಿದ್ದು, ಸಿದ್ದಾಪುರದ ಕೇಸರಿ ಪಡೆ ಯುವಕರ ನೇತೃತ್ವದಲ್ಲಿ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ.