ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, August 1, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಾಗರದ ಗಣಪತಿ ಕೆರೆ ಮರು ಸರ್ವೇ ಕಾರ್ಯಕ್ರಮಕ್ಕೆ ಚಾಲನೆ

ಹೊಸ ದಿಗಂತ ವರದಿ, ಶಿವಮೊಗ್ಗ:

ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಂತೆ ಸಾಗರದ ಗಣಪತಿ ಕೆರೆ ಮರು ಸರ್ವೇ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ರಾಜ್ಯ ಸರ್ವೇ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಇ. ನೇತೃತ್ವದ ಸುಮಾರು 10ಕ್ಕೂ ಹೆಚ್ಚು ಜನರ ತಂಡ ಸರ್ವೇ ಕಾರ್ಯದಲ್ಲಿ ಪಾಲ್ಗೊಂಡಿದೆ.
ಸಾಗರದ ಇತಿಹಾಸ ಪ್ರಸಿದ್ದವಾದ ಗಣಪತಿ ಕೆರೆ ಒತ್ತುವರಿಯಾಗಿದೆ ಎನ್ನುವ ಕೂಗು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿದೆ. ಕೆರೆ ಅಳತೆ 29.08 ಎಕರೆ ಇದ್ದು, ಮಸೀದಿ, ಮಂದಿರ, ಮಠ ಹಾಗೂ ಕೆಲವು ಪ್ರಭಾವಿಗಳು ಕೆರೆ ಜಾಗ ಒತ್ತುವರಿ ಮಾಡಿದ್ದಾರೆ ಎನ್ನುವ ದೂರುಗಳು ವ್ಯಾಪಕವಾಗಿವೆ. ಈ ಸಂಬಂಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಹ ಬೇರೆಬೇರೆಯವರು ಕೆರೆ ಒತ್ತುವರಿ ತೆರವುಗೊಳಿಸುವಂತೆ ದಾವೆ ಹೂಡಿದ್ದಾರೆ.
ಈಗಾಗಲೆ ಕಂದಾಯ ಇಲಾಖೆ, ಸರ್ವೇ ಇಲಾಖೆ ಕೆರೆ ಸರ್ವೇ ನಡೆಸಿದ್ದರೂ ಅದು ವಾಸ್ತವಕ್ಕೆ ದೂರವಿದೆ ಎನ್ನುವ ಮಾತು ಕೇಳಿ ಬಂದಿತ್ತು. ಈಗಾಗಲೆ ಗಣಪತಿ ಕೆರೆಯನ್ನು ಹತ್ತಕ್ಕೂ ಹೆಚ್ಚು ಬಾರಿ ಸರ್ವೇ ನಡೆಸಲಾಗಿದೆ. ಆದರೆ ನಿಖರ ಅಳತೆಯನ್ನು ಪತ್ತೆ ಹಚ್ಚುವಲ್ಲಿ ಯಾರೂ ಯಶಸ್ವಿಯಾಗಿರಲಿಲ್ಲ. ಇದರಿಂದ ಗಣಪತಿ ಕೆರೆ ಒತ್ತುವರಿ ಹಿಂದೆ ಪ್ರಭಾವಿಗಳು ಇರುವುದರಿಂದ ಅದನ್ನು ತೆರವುಗೊಳಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎನ್ನುವ ಮಾತು ಸಹ ಕೇಳಿ ಬಂದಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಜಂಟೀ ನಿರ್ದೇಶಕ ಪ್ರಕಾಶ್ ಇ., ಈ ಹಿಂದೆ ಅನೇಕ ಸರ್ವೇ ಕಾರ್ಯ ನಡೆದಿರಬಹುದು. ಆದರೆ ಈಗ ರಾಜ್ಯ ಉಚ್ಛ ನ್ಯಾಯಾಲಯ ಸ್ಥಳೀಯ ಅಧಿಕಾರಿಗಳಿಂದ ಸರ್ವೇ ನಡೆಸುವುದು ಬೇಡ. ಹಿರಿಯ ಅಧಿಕಾರಿಗಳಿಂದ ನಡೆಸಿ ಎನ್ನುವ ಸೂಚನೆ ಹಿನ್ನೆಲೆಯಲ್ಲಿ ನಮ್ಮ ತಂಡವು ಸರ್ವೇ ಕಾರ್ಯ ಕೈಗೊಂಡಿದೆ. ಹಿಂದೆ ಕೆರೆ ಎಷ್ಟಿತ್ತು ಎನ್ನುವ ಕುರಿತು ಹಳೆ ದಾಖಲೆಗಳಿವೆ. ಅದನ್ನು ಸಹ ಅಳತೆ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ. ಕೆರೆ ಬಾಜುದಾರರು ಎಂದು 81 ಜನರಿಗೆ ನೋಟಿಸ್ ನೀಡಿದ್ದು ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಕೆರೆಯ ನಿಖರ ಅಳತೆಯನ್ನು ವೈಜ್ಞಾನಿಕವಾಗಿ ಸಿದ್ದಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ತಿಳಿಸಿದರು.
ಕೆರೆ ಒತ್ತುವರಿ ತೆರವುಗೊಳಿಸುವಂತೆ ಸಾಗರದ ಮಹೇಶ್ ಕುಮಾರ್ ಟಿ. ಮತ್ತು ಕಿರಣ್ ಗೌಡ ಎಂಬುವವರು ರಾಜ್ಯ ಉಚ್ಛ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss