Sunday, June 26, 2022

Latest Posts

ಪುನೀತ್​ ಡ್ರೀಮ್​ ಪ್ರಾಜೆಕ್ಟ್​‌ ʼಗಂಧದ ಗುಡಿ’ ಟೈಟಲ್‌ ಟೀಸರ್‌ ಬಿಡುಗಡೆ: ಹೇಗಿದೆ ನೋಡಿ..

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ಪುನೀತ್‌ ರಾಜಕುಮಾರ್ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾತುರದಿಂದ ಕಾಯುತ್ತಿದ್ದ ಘಳಿಗೆ ಇಂದು ಬಂದೇ ಬಿಟ್ಟಿದೆ.‌ ಇಂದು ಗಂಧದ ಗುಡಿ’ ಡಾಕ್ಯುಮೆಂಟರಿಯ ಟೈಟಲ್ ಟೀಸರ್​ ಅನಾವರಣ ಆಗಿದೆ.‌

ಹೌದು. ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಇಂದು ಪಿಆರ್‌ಕೆ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಅಪ್ಪು ಅಭಿಮಾನಿಗಳು ಟೀಸರ್‌ ನೋಡಿ ತುಂಬಾನೇ ಖುಷಿ ಪಟ್ಟಿದ್ದಾರೆ. ಆದರೆ ಈ ಸಮಯದಲ್ಲಿ ಅಪ್ಪು ಇಲ್ಲ ಎಂಬ ನೋವು ಎಲ್ಲರ ಕಣ್ಣುಗಳಲ್ಲ ಕೆನೆಗಟ್ಟಿದೆ.

ಇಂದು ಪುನೀತ್‌ ತಾಯಿ ಪಾರ್ವತಮ್ಮ ರಾಜಕುಮಾರ್‌ ಜನ್ಮದಿನ. ಈ ಹಿನ್ನೆಲೆ ಇಂದು ಪುನೀತ್ ರಾಜ್‌ಕುಮಾರ್ ಸಿದ್ಧಪಡಿಸಿದ್ದ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ರಿಲೀಸ್ ಮಾಡಲಾಗಿದೆ.

“ಕರ್ನಾಟಕದ ದಟ್ಟ ಕಾಡಿನ ಒಳಗೆ ಇದನ್ನು ಚಿತ್ರೀಕರಿಸಲಾಗಿದೆ. ಪ್ರಕೃತಿ ಸೌಂದರ್ಯವನ್ನು, ವನ್ಯಜೀವಿಗಳ ಜೀವನವನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಟೀಸರ್ ಸಿಕ್ಕಾಪಡೆ ವೈರಲ್‌ ಆಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss