ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಕಂಪನಿಯೊಂದರ ಬಿಯರ್ ಬಾಟಲ್‌ಗಳ ಮೇಲೆ ಭಾರತದ ರಾಷ್ಟ್ರಪಿತ ಗಾಂಧೀಜಿ ಅವರ ಭಾವಚಿತ್ರ ಮುದ್ರಿಸಿ ಮಾರಾಟ ಮಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.
ಬ್ರೂವರೀಸ್ ಕಂಪನಿ ತಯಾರಿಸುವ ಬಿಯರ್ ಬಾಟಲ್‌ಗಳಲ್ಲಿ ಗಾಂಧೀಜಿ ಅವರ ಭಾವಚಿತ್ರ ಹಾಗೂ ಸಹಿ ಇರುವುದು ಕಂಡುಬಂದಿದೆ. ಬಿಯರ್ ಬಾಟಲ್ ಪ್ರದರ್ಶಿಸುವ ವೀಡಿಯೋ ಇನ್‌ಸ್ಟಗ್ರಾಮ್‌ನಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.