spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮತ್ತೆ ರಿಯಾಲಿಟಿ ಶೋ ನಲ್ಲಿ ಮಿಂಚಲಿದ್ದಾರಾ ಗೋಲ್ಡನ್ ಸ್ಟಾರ್ ಗಣೇಶ್?

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಈಗಾಗಲೇ ಕಿರುತೆರೆ, ಬೆಳ್ಳಿತೆರೆಯಲ್ಲಿ ಭರ್ಜರಿ ಗೆಲುವು ಸಾಧಿಸಿ, ಅಭಿಮಾನಿಗಳಿಂದ ಗೋಲ್ಡನ್ ಸ್ಟಾರ್ ಬಿರುದು ಪಡೆದಿರುವ ನಟ ಗಣೇಶ್ ಈಗ ಮತ್ತೆ ಟಿವಿ ಶೋ ಗೆ ಕಾಲಿಡುತ್ತಿದ್ದಾರೆ.
ಹೌದು, ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ ಪ್ರಾರಂಭವಾಗುತ್ತಿದ್ದು, ಇದರಲ್ಲಿ ಗಣೇಶ್ ಭಾಗವಹಿಸಲಿದ್ದಾರೆ. ನಿನ್ನೆಯಷ್ಟೆ ಈ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದೆ.
ಈ ಪೋಸ್ಟ್ ಗೆ ಅಡಿಬರಹ ಕೊಟ್ಟಿರುವ ಅವರು, ಬಹಳ ದಿನಗಳ ನಂತರ ಕಿರುತೆರೆಗೆ, ಜೀ ಕನ್ನಡ ಮೂಲಕ ಒಂದು ಹೊಸ ರಿಯಾಲಿಟಿ ಶೋ ಜೊತೆ ಬರ್ತಿದ್ದೀನಿ. ಶೀಘ್ರದಲ್ಲಿ.. ನಿರೀಕ್ಷಿಸಿ… ಎಂದಿದ್ದಾರೆ.
ಸದ್ಯ ಈ ಕಾರ್ಯಕ್ರಮ ಯಾವುದು ಎನ್ನುವುದು ಎಲ್ಲರ ಕುತೂಹಲವಾಗಿದ್ದು, ಎಲ್ಲರೂ ಟಿಪಿಕಲ್ ಗಣೇಶ್ ಅವರ ಕಾಮಿಡಿ ಕಾರ್ಯಕ್ರಮವಾಗಿರಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss