ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಕಾಸರಗೋಡು:
ಸೆಪ್ಟೆಂಬರ್ 10, 11 ರಂದು ನಡೆಯುವ ಗಣೇಶೋತ್ಸವದ ಅಂಗವಾಗಿ ದೇವಾಲಯದೊಳಗಣ ಆಚರಣೆಗಳಿಗೆ ಮಾತ್ರ ಕೋವಿಡ್ ಕಟ್ಟುನಿಟ್ಟುಗಳ ಪಾಲನೆಯೊಂದಿಗೆ ಅನುಮತಿ ನೀಡಲು ಬುಧವಾರ ಜರಗಿದ ಕಾಸರಗೋಡು ಜಿಲ್ಲಾ ಕೊರೋನಾ ಕೋರ್ ಸಮಿತಿಯ ಸಭೆಯು ಮಹತ್ವದ ತೀರ್ಮಾನ ಕೈಗೊಂಡಿದೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರಕಾರದ ಆದೇಶ ಪ್ರಕಾರ ಈ ವಿಚಾರ ಪ್ರಕಟಿಸಲಾಗಿದೆ. ನಿಗದಿತ ಜನ ಮಾತ್ರ ಈ ವೇಳೆ ಭಾಗವಹಿಸಬೇಕು. ಈ ಸಂಬಂಧ ಅಗತ್ಯದ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹೆಚ್ಚುವರಿ ದಂಡನಾಧಿಕಾರಿಗಳಿಗೆ ಹೊಣೆ ನೀಡಲಾಗಿದೆ.