ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………
ಹೊಸ ದಿಗಂತ ವರದಿ, ಕಲಬುರಗಿ:
ಮೈಸೂರಿನ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ, ಕೃತ್ಯವನ್ನು ಎಸಗಿದ ಪಾಪಿಗಳನ್ನು ಎನ್ಕೌಂಟರ್ ಮಾಡಬೇಕೆಂದು ನಾಲ್ಕು ಚಕ್ರ ತಂಡದ ಸದಸ್ಯರು ಕಪ್ಪು ಪಟ್ಟಿ ಧರಿಸಿ, ಪ್ರತಿಭಟನೆ ಮಾಡಿದ್ದಾರೆ.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ನಾಲ್ಕು ಚಕ್ರ ತಂಡದ ಮುಖ್ಯಸ್ಥೆ ಮಾಲಾ ಕಣ್ಣಿ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವ ಬದಲು, ಹಿಂದೆ ಮುಂದೆ ನೋಡದೇ ಎನ್ ಕೌಂಟರ್ ಮಾಡಬೇಕು. ಇಂತಹ ವ್ಯಕ್ತಿಗಳಿಂದಲೇ ಸಮಾಜದಲ್ಲಿ ಹೆಣ್ಣು ತಲೆ ಎತ್ತಿ ನಡೆಯಲು ಆಗುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. ಇಂತಹ ಪಾಪಿಗಳಿಗೆ ಎನ್ ಕೌಂಟರ ಮಾಡಿದರೇ ಮಾತ್ರ ಹೆಣ್ಣು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾದ್ಯವೆಂದು ತಿಳಿಸಿದರು.
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಯಾರೇ ಆಗಿರಲಿ ಕಾನೂನಾತ್ಮಕವಾಗಿ ಅವರಿಗೆ ಶಿಕ್ಷೆ ನೀಡುವ ಮೂಲಕ ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಓಡಾಡು ಹಾಗೇ ಕಠಿಣ ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕೆಂದು ಹೇಳಿದರು.
ಒಂದು ವೇಳೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ, ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಮಹಿಳೆಯರು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹೋರಾಟಗಾರ ಎಂ.ಎಸ್.ಪಾಟೀಲ ನರಿಬೋಳ, ಮಾಲಾ ದಣ್ಣೂರ, ಕಲ್ಯಾಣರಾವ ಪಾಟೀಲ, ಮಹೇಶಚಂದ್ರ ಪಾಟೀಲ, ಜ್ಯೋತಿ ಕೋಟನೂರ್, ವಿಜಯಲಕ್ಷ್ಮಿ ಹಿರೇಮಠ, ಜಯಶ್ರೀ ಜೈನ್, ಜ್ಯೋತಿ ಪಾಟೀಲ, ವೈಶಾಲಿ ನಾಟಿಕರ್, ನವ್ಯ ಬಿಲಗುಂದಿ, ತಾತಗೌಡ ಪಾಟೀಲ ಶಿವಾನಂದ ಮಠಪತಿ ಇದ್ದರು.