ಬಾಯಲ್ಲಿ ನೀರೂರಿಸುವ ಬೆಳ್ಳುಳ್ಳಿ ಉಪ್ಪಿನಕಾಯಿ ಎಂದಾದರೂ ಮಾಡಿದ್ದೀರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾನ್ಯವಾಗಿ ಉಪ್ಪಿನಕಾಯಿ ಇಲ್ಲದ ಅಡುಗೆ ಮನೆಯಿರುವುದಿಲ್ಲ ಊಟಕ್ಕೆ ಉಪ್ಪಿನಕಾಯಿ ಇಲ್ಲದೆ ಯಾವುದೇ ಊಟವಾಗಲೀ ಸಂಪೂರ್ಣ ಆಗಲ್ಲ. ಹೀಗಾಗಿ ಹಲವಾರು ರೀತಿಯ ತರಕಾರಿ ಉಪ್ಪಿನಕಾಯಿ ಕೇಳಿರುತ್ತೇವೆ ಅಅದರಲ್ಲೇ ಬೆಳ್ಳುಳ್ಳಿ ಅಲ್ಲೊಂದು ಇಲ್ಲೊಂದು ಕಾಣಸಿಗುತ್ತದೆ. ಆದರೆ, ಸಂಪೂರ್ಣ ಬೆಳ್ಳುಳ್ಳಿ ಉಪ್ಪಿನಕಾಯಿ ಹೇಗೆ ಮಾಡೋದಂತ ನಿಮಗೆ ಗೊತ್ತಾ? ಬನ್ನಿ ನೋಡೋಣ.

ಬೇಕಾಗುವ ಪದಾರ್ಥಗಳು: 

ಬೆಳ್ಳುಳ್ಳಿ -1/4 ಕೆಜಿ
ಎಳ್ಳು – 50 ಗ್ರಾಂ
ನಿಂಬೆ – 1
ಬೆಲ್ಲ – ಸ್ವಲ್ಪ
ಎಣ್ಣೆ – 1/4 ಕೆಜಿ
ಮೆಂತ್ಯ – 50 ಗ್ರಾಂ
ಸಾಸಿವೆ – 50 ಗ್ರಾಂ
ಉಪ್ಪು – ರುಚಿಗೆ,
ಮೆಣಸಿನ ಪುಡಿ – 50 ಗ್ರಾಂ

ಮಾಡುವ ವಿಧಾನ: 

ಮೊದಲಿಗೆ ಬೆಳ್ಳುಳ್ಳಿಯನ್ನು ಬಿಸಿಲಿನ ಸ್ಥಳದಲ್ಲಿ ಇರಿಸಿ, ಸ್ವಲ್ಪ ಸಿಪ್ಪೆ ತೆಗೆಯಿರಿ, ಇನ್ನೂ ಸ್ವಲ್ಪ ಸಿಪ್ಪೆಯನ್ನಿರಿಸಿ. ಈಗ ಬೆಲ್ಲ ಪುಡಿ ಮಾಡಿ, ನಿಂಬೆ ಹಣ್ಣಿನ ರಸ ತೆಗೆದು ಪಕ್ಕಕ್ಕಿಡಿ. ಒಲೆ ಹೊತ್ತಿಸಿ ಎಣ್ಣೆ ಹಾಕದೆಯೇ ಮೆಂತ್ಯ, ಸಾಸಿವೆ ಮತ್ತು ಎಳ್ಳನ್ನು ಪ್ರತ್ಯೇಕವಾಗಿ ಹುರಿದು ನಂತರ ಮೂರನ್ನೂ ಒಟ್ಟಿಗೆ ಮಿಶ್ರಣ ಮಾಡಿ.

ಇದೀಗ ಅಗಲವಾದ ಪಾತ್ರೆ ತೆಗೆದುಕೊಳ್ಳಿ. ಬೆಳ್ಳುಳ್ಳಿ ಎಸಳು, ಉಪ್ಪು, ಖಾರ, ಎಣ್ಣೆ ಮತ್ತು ಮಿಕ್ಸ್‌ ಕಾಳುಗಳನ್ನು ಸೇರಿಸಿ  ಚೆನ್ನಾಗಿ ಮಿಶ್ರಣ ಮಾಡಿ. ಈಗ ಇದರಲ್ಲಿ ಬೆಲ್ಲ ಮತ್ತು ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಕಲಸಿ ಮುಚ್ಚಿಡಿ. ಎರಡನೇ ದಿನ ಇನ್ನೂ ಸ್ವಲ್ಪ ಎಣ್ಣೆ ಹಾಕಿ ಮತ್ತೆ ಕಲಸಿ. ನಿಮ್ಮ ರುಚಿಗೆ ತಕ್ಕಂತೆ ಉಪ್ಪು, ಖಾರ ಮತ್ತು ಹುಳಿ ಸೇರಿಸಿ.

ಗಮನಕ್ಕೆ: ಉಪ್ಪಿನಕಾಯಿಗೆ ಯಾವುದೇ ಕಾರಣಕ್ಕೂ ನೀರು ತಗಲಬಾರದು. ಒಂದು ಗಾಜಿನ ಬಾಟಲಿಯೊಳಗೆ ಸಂಗ್ರಹಿಸಿ ಅನ್ನ, ಚಪಾತಿ ಜೊತೆ ಸವಿಯಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!