Sunday, July 3, 2022

Latest Posts

‘ವೈ ವೇಸ್ಟ್’ ಹೆಸರಲ್ಲಿ ನಿತ್ಯ ಲಕ್ಷಾಂತರ ಗ್ಯಾಲನ್ ನೀರು ಉಳಿಸುತ್ತಾಳೆ ಈ ನಮ್ಮ ಗರ್ವಿತಾ!

ನೀವು, ನಾವು ಹೊಟೇಲ್’ಗೆ ಹೋಗ್ತೀವಿ. ಒಳಗಡೆ ಹೋಗಿ ಕೂತ ಕೂಡಲೇ ಟೇಬಲ್‌ಗೆ ಮೊದಲು ಬರುವುದು ನೀರಿನ ಲೋಟ. ಆಮೇಲೆ ಅದಕ್ಕೆ ನೀರು. ನೀವು ಸ್ವಲ್ಪ ನೀರು ಕುಡಿದು ಖಾಲಿ ಮಾಡಿದರೂ ಸಾಕು, ವೇಟರ್ ಮತ್ತೆ ಬಂದು ಗ್ಲಾಸ್ ತುಂಬ ನೀರು ಸುರಿತಾನೆ. ನಾವು ಪೂರ್ತಿ ಗ್ಲಾಸ್ ನೀರು ಕುಡಿತೀವಾ? ಕೆಲವೊಮ್ಮೆ ಕುಡಿತೀವಿ, ಕೆಲವೊಮ್ಮೆ ಎರಡು ಸಿಪ್ ಕುಡಿದು ಉಳಿದಿದ್ದನ್ನು ಅಲ್ಲೆ ಬಿಟ್ಟು ಹೋಗ್ತೀವಿ. ಅದನ್ನು ಹೊಟೇಲ್ ನವರು ಗಟಾರಕ್ಕೆ ಸುರಿತಾರೆ. ಹಾಗೆ ಸುರಿಯೋದ್ರಿಂದ ವರ್ಷಕ್ಕೆ ಕೋಟಿ- ಕೋಟಿ ಲೀಟರ್ ನೀರು ವೇಸ್ಟ್ ಆಗ್ತಿದೆಯಂತೆ. ಇದರ ಬಗ್ಗೆ ಯಾರಾದರೂ ಒಂದು ದಿನ ಯೋಚಿಸಿದ್ದೀರಾ?

ಖಂಡಿತ ನೀವು, ನಾವು ಯೋಚಿಸಿರಲ್ಲ…. ಆದರೆ ಬೆಂಗಳೂರಿನಿ ಗರ್ವಿತಾ ಗುಲ್ಹಾಟಿ ಯೋಚಿಸಿದ್ರು.ಥಿಂಕ್ ಮಾಡಿ ಅವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅದನ್ನು ಜಾರಿಗೆ ತಂದ್ರು. ಜನರಿಗೆ ಹೊಟೇಲ್ ನಲ್ಲಿ ವೇಸ್ಟ್ ಆಗುತ್ತಿರುವ ನೀರಿನ ಬಗ್ಗೆ ಜಾಗೃತಿ ಮೂಡಿಸಲೇ ಬೇಕು ಎಂದು “ವೈ ವೇಸ್ಟ್” ಅನ್ನೋ ಸಂಸ್ಥೆ ಕಟ್ಟಿದರು.

ಮೊದ ಮೊದಲು ಗರ್ವಿತಾ ಹೊಟೇಲ್‌ಗೆ ಹೋಗಿ ವೇಸ್ಟ್ ಆಗುತ್ತಿರುವ ನೀರಿನ ಬಗ್ಗೆ ಹೇಳಿದಾಗ ಜನರು ಕ್ಯಾರೆ ಅನ್ನಲಿಲ್ಲವಂತೆ. ಹಾಸ್ಯ ಮಾಡಿದ್ದರಂತೆ. ಯಾವಾಗ “ವೈ ವೇಸ್ಟ್” ತಂಡವೇ ಹೊಟೇಲ್‌ಗಳಿಗೆ ಹೋಯ್ತೋ ಆಗ ಅವರಿಗೆ ಇಗ್ನೋರ್ ಮಾಡೋದಕ್ಕೆ ಆಗಲಿಲ್ಲ. ಅಲ್ಲಿಗೆ ಗರ್ವಿತಾ ಹಾಗೂ ತಂಡಕ್ಕೆ ಬೇಸಿಕ್ ಯಶಸ್ಸು ಸಿಕ್ಕಿತು.

2015ರಲ್ಲಿ ಪ್ರಾರಂಭವಾದ ಈ ಇನಿಷಿಯೇಟಿವ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪ್ರಿಸಿಯೇಷನ್ ಸಿಕ್ಕಿದೆ. ಬೆಂಗಳೂರಿನಲ್ಲಿ ಸುಮಾರು 30 ರೆಸ್ಟೋರೆಂಟ್‌ಗಳು ನೀರನ್ನು ಉಳಿಸಲು ಸಹಕರಿಸುತ್ತಿವೆ. ಟೇಬಲ್ ಮೇಲೆ ಗ್ಲಾಸ್ ಇಟ್ಟು ನಿಮಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಹಾಕಿಕೊಳ್ಳಿ ಅಂತಿದ್ದಾರೆ. ವೇಟರ್ಸ್ ನೀರು ಹಾಕುವಾಗ ಅರ್ಧ ಗ್ಲಾಸ್ ಮಾತ್ರ ಹಾಕ್ತಿದ್ದಾರೆ. ನೀರು ವೇಸ್ಟ್ ಮಾಡಬೇಡಿ ಎಂದು ಟೇಬಲ್ ಪಕ್ಕ ಸೂಚನಾ ಫಲಕ ಹಾಕಿದ್ದಾರೆ. ಇವೆಲ್ಲ ನೋಡುವುದಕ್ಕೆ ಸಣ್ಣ ಬದಲಾವಣೆ ಅನಿಸಬಹುದು. ಆದರೆ ಇಂತಹ ಬದಲಾವಣೆಗಳೇ ನಾಳೆಯ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ.

ಅವತ್ತು ಗರ್ವಿತಾ ನೀರು ಉಳಿಸಲು ಮಾಡಿದ ಪ್ಲಾನ್ ಇವತ್ತು ಇಂಟರ್ ನ್ಯಾಷನಲ್ ಲೆವೆಲ್‌ನಲ್ಲಿ ಫೇಮಸ್ ಆಗಿದೆ. ಗರ್ವಿತಾ ಜಾಗತಿಕ ಯುವ ಪರಿವರ್ತನಾ ಸಾಧಕರ ಪ್ರಶಸ್ತಿಯನ್ನು ಪಡೆದಿದ್ದಾರೆ. 42 ದೇಶಗಳ ಸಾವಿರ ಯಂಗ್ ಲೀಡರ್ಸ್ಗಳ ಮಧ್ಯೆ ಭಾರತದ ಒನ್ ಆಂಡ್ ಓನ್ಲಿ ಯಂಗ್ ಲೀಡರ್ ಆಗಿ ಗರ್ವಿತಾ ಗ್ಲೋಬಲ್ ಅಚೀವರ್ಸ್ ಎನಿಸಿಕೊಂಡಿದ್ದಾರೆ.

15 ವಯಸ್ಸಿನಲ್ಲಿದ್ದಾಗಲೇ ವೈ ವೇಸ್ಟ್ ಎಂಬ ಸಾಮಾಜಿಕ ಸಂಸ್ಥೆ ಸ್ಥಾಪಿಸಿ ಜಲ ಸಂರಕ್ಷಣೆಯ ಬಗ್ಗೆ ಸಾಮಾಜಿಕ ಕಳಕಳಿ ಮೂಡಿಸಿ ಪರಿವರ್ತನೆ ತಂದ ಕಾರಣಕ್ಕಾಗಿ ವಿಶ್ವದ 100 ಯುವ ಚೇಂಜ್ ಮೇಕರ್‌ಗಳಲ್ಲಿ ಒಬ್ಬರಾಗಿ ಗರ್ವಿತಾ ಗುಲ್ಹಾಟಿ ಆಯ್ಕೆಯಾಗಿದ್ದು.

“ಜಾಗತಿಕ ರಂಗದಲ್ಲಿ ಪರಿವರ್ತನೆ ಮೂಡಿಸಿದವರ ಪೈಕಿ ಸ್ಥಾನ ಸಿಕ್ಕಿರುವುದು ನನಗೆ ಸಂತಸ ಮೂಡಿಸಿದೆ. ಈ ರಂಗದಲ್ಲಿ ಇನ್ನಷ್ಟು ಕಲಿಯಲು, ಇತರೆ ಯುವ ಸಾಧಕರ ಸಾಧನೆಗಳನ್ನು ತಿಳಿದುಕೊಳ್ಳಲು ನನಗೆ ಇದು ಉತ್ತಮ ಅವಕಾಶ ಸಿಕ್ಕಿದೆ. ನಮ್ಮ ಸಮಾಜದ ಪ್ರತಿಯೊಬ್ಬ ಯುವಕರು ಮತ್ತೊಬ್ಬರ ಧನಾತ್ಮಕ ಸಾಧನೆಗೆ ಸ್ಫೂರ್ತಿಯಾಗುವಂತೆ ಮಾಡೋದೇ ನನ್ನ ಗುರಿ” ಎನ್ನುತ್ತಾರೆ ಗರ್ವಿತಾ.

ಗರ್ವಿತಾಳ ಪುಟ್ಟ ಮನಸಿನ ಕಾಳಜಿ ಕೇವಲ ಗರ್ವಿತಾಗೆ ಮಾತ್ರ ಸೀಮಿತವಾಗದಿಲಿ. ನೆಕ್ಸ್ಟ್ ಟೈಮ್ ಹೊಟೇಲ್ಗೆ ಹೋದಾಗ ಎಷ್ಟು ಬೇಕೋ ಅಷ್ಟು ಮಾತ್ರ ನೀರು ಗ್ಲಾಸ್ ಗೆ ಹಾಕಿಕೊಳ್ಳಿ, ನಿಮ್ ಪಕ್ಕದ ಟೇಬಲ್ ನಲ್ಲಿ ಕೂತವರಿಗೂ ಈ ಬಗ್ಗೆ ತಿಳಿಸಿಕೊಡಿ. ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿ ನಾವೂ ಕೂಡ ವೈ ವೇಸ್ಟ್ ಟೀಮ್ ಗೆ ಸೇರೋಣ. ಯಾಕಂದರೆ ಇದು ನಿಜವಾಗ್ಲೂ ಒಂದು ಒಳ್ಳೆ ಕೆಲಸ ಸ್ವಾಮಿ…

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss