ಗೌತಮ್ ಅದಾನಿ ಈಗ ವಿಶ್ವದ ಮೂರನೇ ಶ್ರೀಮಂತ ಉದ್ಯಮಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಈಗ ವಿಶ್ವದಲ್ಲೇ ಮೂರನೇ ಶ್ರೀಮಂತ ಉದ್ಯಮಿಯಾಗಿ ಹೊರಹೊಮ್ಮಿದ್ದು, ಎಲೋನ್ ಮಸ್ಕ್ ಮತ್ತು ಜೆಫ್ ಬೆಜೋಸ್ ನಂತರದ ಸ್ಥಾನವನ್ನು ಪಡೆದಿದ್ದಾರೆ. ಐಷಾರಾಮಿ ಬ್ರಾಂಡ್ ಲೂಯಿ ವಿಟಾನ್‌ನ ಸಹ-ಸಂಸ್ಥಾಪಕ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕುವ ಮೂಲಕ ಅದಾನಿ ಮೊದಲ ಬಾರಿಗೆ ಈ ಸ್ಥಾನಕ್ಕೆ ಏರಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಗೌತಮ್ ಅದಾನಿ 137 ಬಿಲಿಯನ್ ಡಾಲರ್‌ ಸಂಪತ್ತು ಹೊಂದಿದ್ದಾರೆ. ಪ್ರಸ್ತುತ ಅದಾನಿ ಅವರ ಸಂಪತ್ತು 153 ಬಿಕೆಯನ್‌ ಡಾಲರ್‌ ನಷ್ಟಿರುವ ಜೆಫ್ ಬೆಜೋಸ್‌ಗೆ ಹತ್ತಿರವಾಗಿದೆ. ಆದಾಗ್ಯೂ, ಅದಾನಿ ಇನ್ನೂ ಎಲೋನ್ ಮಸ್ಕ್‌ನಿಂದ $114 ಬಿಲಿಯನ್ ದೂರದಲ್ಲಿದ್ದಾರೆ, ಅವರ ಸಂಪತ್ತು $251 ಬಿಲಿಯನ್ ಡಾಲರ್ ಆಗಿದೆ.
2022 ರಲ್ಲಿ ಅದಾನಿಯು ತನ್ನ ಸಂಪತ್ತಿಗೆ 61 ಶತಕೋಟಿ ಡಾಲರ್‌ ಸಂಪತ್ತನ್ನು ಸೇರಿಸುವ ಮೂಲಕ ಅತಿ ಹೆಚ್ಚು ಲಾಭ ಗಳಿಸಿದ ಉದ್ಯಮಿಯಾಗಿ ಅದಾನಿ ಹೊರಹೊಮ್ಮಿದ್ದಾರೆ. ಇದಕ್ಕೆ ಹೋಲಿಸಿದರೆ, ಮಸ್ಕ್ 19 ಶತಕೋಟಿ ಡಾಲರ್ ಕಳೆದುಕೊಂಡರೆ, ಬೆಜೋಸ್ 39 ಶತಕೋಟಿ ಡಾಲರ್ ಕಳೆದುಕೊಂಡಿದ್ದಾರೆ. ಆದರೆ ಮುಖೇಶ್ ಅಂಬಾನಿ ಅದೇ ಅವಧಿಯಲ್ಲಿ $2 ಬಿಲಿಯನ್ ಸೇರಿಸಿದ್ದಾರೆ.
ಮತ್ತೊಂದು ವಿಚಾರವೆಂದರೆ, ಅದಾನಿ ಮತ್ತು ಅಂಬಾನಿ ನಡುವಿನ ಅಂತರ ಹೆಚ್ಚುತ್ತಲೇ ಇದೆ. ಹಲವಾರು ತಿಂಗಳುಗಳ ಕಾಲ ಪರಸ್ಪರ ನೆಕ್ ಟು ನೆಕ್ ಪೈಪೋಟಿ ನಡೆಸುತ್ತಿದ್ದ ಈ ಉದ್ಯಮಿಗಳಲ್ಲಿ ಅದಾನಿಯವರು ಅಂಬಾನಿಯವರನ್ನು ಹಿಂದಿಕ್ಕಿ ಬಹುದೂರ ಸಾಗಿದ್ದಾರೆ. ಮುಖೇಶ್ ಅಂಬಾನಿಯವರ ಸಂಪತ್ತು 92 ಶತಕೋಟಿ ಡಾಲರ್‌ ನಷ್ಟಿದೆ.
ರಿಲಯನ್ಸ್ ಇಂಡಸ್ಟ್ರೀಸ್‌ನ ಮಾರುಕಟ್ಟೆಯಲಲಿ ಇತ್ತೀಚಿಗೆ ಸಂಭವಿಸಿದ ಕುಸಿತದ ನಂತರ, ಅಂಬಾನಿ ಈಗ ಟಾಪ್ 10 ಬಿಲಿಯನೇರ್‌ಗಳ ಪಟ್ಟಿಯಿಂದಲೂ ಹೊರಬಿದ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!