Thursday, August 11, 2022

Latest Posts

ವಿಧಾನಸಭಾ ಚುನಾವಣೆ: ದೀದಿ ನಾಡಿನಲ್ಲಿ ಬಿಜೆಪಿ ಪರ ಸಂಸದ ಗೌತಮ್ ಗಂಭೀರ್ ಪೂರ್ಣ ಪ್ರಮಾಣದ ಪ್ರಚಾರ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪ್ರಚಾರ ನಡೆಸಲಿದ್ದಾರೆ.

8 ಹಂತಗಳಲ್ಲಿನ ನಡೆಯಲಿರುವ ಚುನಾವಣೆಗೆ ಮಾ.22ರಿಂದ ಬಿಜೆಪಿ ಪರ ಪೂರ್ಣಪ್ರಮಾಣದ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ. ಹರಿಯಾಣದಲ್ಲಿದಲ್ಲಿ ನಡೆದ ಚುನಾವಣೆಗೆ ಮಾಜಿ ಹಾಕಿ ಆಟಗಾರ ಸಂದೀಪ್ ಸಿಂಗ್ ಪರ ಚುನಾವಣಾ ಪ್ರಚಾರ ನಡೆಸಿದ್ದ ಗಂಭೀರ್, ಇದೇ ಮೊದಲ ಬಾರಿಗೆ ಅನ್ಯ ರಾಜ್ಯದಲ್ಲಿ ಪ್ರಚಾರದ ಕಣಕ್ಕಿಳಿಯುತ್ತಿದ್ದಾರೆ.

ಬಂಗಾಳದಲ್ಲಿ ಬಿಜೆಪಿಗೆ ಯಾವುದೇ ಸ್ಥಾನವಿಲ್ಲ ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಾತಿಗೆ ಬೇಸರ ವ್ಯಕ್ತ ಪಡಿಸಿದ ಗಂಭೀರ್, ನಾನು ಬಂಗಾಳ ಕುಟುಂಬದಲ್ಲಿ ಭಾಗಿಯಾಗಿದ್ದೇನೆ. ಅಲ್ಲಿನ ಜನರ ಪ್ರೀತಿ ನಮ್ಮ ಮೇಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss