ದಿಗಂತ ವರದಿ ಕೊಪ್ಪಳ:
ಬುಧವಾರದಿಂದ ಆರಂಭವಾದ ಸಾರಿಗೆ ನೌಕರ ಮುಷ್ಕರ ಎರಡನೇ ದಿನವಾದ ಗುರುವಾರ ಕೂಡ ಮುಂದುವರೆದಿದ್ದು, ಬಸ್ ಗಳ ಸಂಚಾರ ಕೂಡ ಮತ್ತೆ ಸ್ಥಗಿತವಾಗುವೆ. ಆದರೆ ಮುಷ್ಕರ ಮದ್ಯೆಯು ಕೂಡ ಕರ್ತವ್ಯಕ್ಕೆ ಹಾಜರಾಗುವ ನೌಕರರಿಗೆ ಸಾರಿಗೆ ಅಧಿಕಾರಿಗಳು ಗುಲಾಬಿ ಹೂವು ನೀಡುವುದರ ಮೂಲಕ ಸ್ವಾಗತಿಸಲಾಯಿತು.
ಬುಧವಾರ 14 ಜನ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಗುರುವಾರ ಕೂಡ ಮುಷ್ಕರ ಮಧ್ಯೆ ಕೆಲವು ನೌಕರರು ಕರ್ತವ್ಯ ಕ್ಕೆ ಹಾಜರಾಗಿದ್ದರು. ಆದರೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಸಾರಿಗೆಯ ವಿಭಾಗಿಯ ಆಯುಕ್ತ ಎಂ.ಎ.ಮುಲ್ಲಾ ಅವರು ಗುಲಾಬಿ ನೀಡಿ ಆಲ್ ದಿ ಬೆಸ್ಟ್ ಹೇಳುವುದರ ಮೂಲಕ ನೌಕರರನ್ನು ಕೆಲಸಕ್ಕೆ ಕಳಿಸಿದರು.
ರಾಯಚೂರು ಬಸ್ ಗೆ ತೆರಳಲು ಕರ್ತವ್ಯಕ್ಕೆ ಹಾಜರಾದ ಚಾಲಕ. ಬಸವರಾಜ ಹಾಗೂ ಹಂಚನಾಳ ಎನ್ನುವವರಿಗೆ ಗುಲಾಬಿ ನೀಡಿ ನಿಮ್ಮ ಜೋತೆ ನಮ್ಮ ಇಲಾಖೆ ಇದೆ. ಆದರೆ ನಮಗೆ ಸಾರ್ವಜನಿಕರ ಹಿತ ಮುಖ್ಯ ಮೊದಲು ಕೆಲಸ ಮಾಡುವುದರ ಮೂಲಕ ನಮ್ಮ ಬೇಡಿಕೆಗಳನ್ನು ಈಡೆರಿಸಿಕೊಳ್ಳ ಬೇಕು ಎಂದು ಸಾರಿಗೆ ವಿಭಾಗಿಯ ಆಯುಕ್ತ ಎಂ.ಎ.ಮುಲ್ಲಾ ಅವರು ಕರ್ತವ್ಯಕ್ಕೆ ಕಳುಹಿಸಿದರು.
ಕೊಪ್ಫಳ ವಿಭಾಗಿಯ 5 ಡಿಪೋಗಳಲ್ಲಿ 402 ಸೆಡ್ಯೂಲ್ ಗಳು ಇದ್ದು, ಅದರಲ್ಲಿ ಕೊಪ್ಪಳ ಡಿಪೋದಿಂದ ಗುರುವಾರ ಮೂರು ಬಸ್ ಗಳು ಹೊರಗಡೆ ಹೋಗಿವೆ. ಉಳಿದ ಡಿಪೋಗಳಲ್ಲಿ ಕೂಡ ನೌಕರರನ್ನು ಕೆಲಸಕ್ಕೆ ಕಳಿಸುವ ಕೆಲಸ ನಡೆದಿದೆ ಎಂದರು.