ಮುಸ್ಲಿಂ ಗಲಾಟೆ, ನೂಪುರ್‌ ಶರ್ಮಾ ಬೆಂಬಲಕ್ಕೆ ನಿಂತ ಡಚ್‌ ರಾಜಕಾರಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರವಾದಿ ಹೇಳಿಕೆ ಕುರಿತು ಭುಗಿಲೆದ್ದಿರುವ ಪ್ರತಿಭಟನೆಗಳ ಬೆನ್ನಲ್ಲೇ ಡಚ್ ರಾಜಕಾರಣಿ ಗೀರ್ಟ್ ವೈಲ್ಡರ್ಸ್ ಮಾಜಿ ವಕ್ತಾರೆ ನೂಪುರ್ ಶರ್ಮಾ ಬೆಂಬಲಕ್ಕೆ ನಿಂತಿದ್ದಾರೆ. ನೂಪುರ್‌ ಶರ್ಮಾ ಬೆಂಬಲಿಸಿದ್ದಕ್ಕೆ ಗೀರ್ಟ್ ವೈಲ್ಡರ್ಸ್‌ಗೆ ನೂರಾರು ಕೊಲೆ ಬೆದರಿಕೆಗಳು ಬರುತ್ತಿವೆ. ಈ ಕರೆಗಳು ನಾನು ಮತ್ತಷ್ಟು ದೃಢತೆಯಿಂದ ಅವರಿಗೆ ಬೆಂಬಲ ನೀಡಲು ಸಹಕರಿಸುತ್ತಿವೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಜೊತೆಗೆ ಭಾರತದಲ್ಲಿ ಅವರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಟೀಕಿಸಿದ್ದಾರೆ.

ಇಸ್ಲಾಂ ಧರ್ಮವನ್ನು ದೂಷಿಸಿದ್ದಕ್ಕಾಗಿ ವ್ಯಾಪಕ ಟೀಕೆಗೊಳಗಾದ ಡಚ್ ರಾಜಕಾರಣಿ ಇಂದು(ಭಾನುವಾರ) ಟ್ವೀಟ್ ಮಾಡಿದ್ದಾರೆ, ಟ್ವಿಟ್ಟರ್‌ನಲ್ಲಿ ʻನಾನು ಭಾರತೀಯನೂ ಅಲ್ಲ ಹಿಂದೂ ಕೂಡ ಅಲ್ಲ, ಆದರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸುತ್ತಿರುವುದಕ್ಕೆ ಕಾರಣವಿದೆ. ಹಿಂದೂ ದೇವರನ್ನು ಅವಮಾನಿಸುವುದು ಸಮರ್ಥನೀಯ, ಅದರೆ ಮೊಹಮದ್‌ ಬಗ್ಗೆ ಸತ್ಯವನ್ನು ಹೇಳುವುದು ಅನಮರ್ಥನೀಯ ಎಂಬುದು ಜಾತ್ಯಾತೀತೆಯ ಅರ್ಥ ಅಲ್ಲವಲ್ಲ ಎಂದು ಅವರು ಟೀಕಿಸಿದ್ದಾರೆ. ಹಿಂದೂ ದೇವರುಗಳನ್ನು ಅವಮಾನ ಮಾಡಿದ್ದಕ್ಕಾಗಿ ನೂಪುರ್‌ ಶರ್ಮಾ ಪ್ರತಿಕ್ರಿಯೆ ಸಂಪೂರ್ಣ ಸಮರ್ಥನೆಯಾಗಿದೆ ಎಂದು ನಾನು ಭಾವಿಸಿದ್ದೇನೆ. ಹಾಗಾಗಿ ನೂಪುರ್ ಶರ್ಮಾ ಅವರನ್ನು ಸಾರ್ವಜನಿಕವಾಗಿ  ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗೀರ್ಟ್ ವೈಲ್ಡರ್ಸ್ ಒತ್ತಾಯಿಸಿದ್ದಾರೆ. ʻಅಪರಾಧಿಗಳು ಮತ್ತು ಭಯೋತ್ಪಾದಕರು ಮಾತ್ರ ಧಾರ್ಮಿಕ ಅಸಹಿಷ್ಣುತೆ ಮತ್ತು ದ್ವೇಷವನ್ನು ಸಾಧಿಸಲು ಬೀದಿ ಹಿಂಸಾಚಾರಕ್ಕೆ ಕೈ ಹಾಕುತ್ತಾರೆ ಎಂದು ವ್ಯಾಖ್ಯಾನಿಸಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಗುರಿಯಾಗಿಸಿ ಮುಸ್ಲಿಂ ವಿರೋಧಿ ಟ್ವೀಟ್‌ ಮಾಡಿದ್ದಕ್ಕಾಗಿ  ಗೀರ್ಟ್ ವೈಲ್ಡರ್ಸ್ ಅವರ ಟ್ವಿಟ್ಟರ್ ಖಾತೆಯನ್ನು ಏಪ್ರಿಲ್‌ನಲ್ಲಿ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!