ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಕಲಬುರಗಿ:
ಸಾಮಾಜಿಕ ಜಾಲತಾಣವನ್ನು ಸದ್ಬಳಕೆ ಮಾಡಿಕೊಂಡು ಶಾಮ್ ಸುಂದರ ಕುಲಕರ್ಣಿ ರಚಿಸಿದ ಗೀತಾ ಸಾರ ಪುಸ್ತಕ ಅಧ್ಬುತ ಕೃತಿಯಾಗಿದೆ ಎಂದು ನಗರಾಭಿವೃದ್ದಿ ಅಧ್ಯಕ್ಷರಾದ ದಾಯಘನ್ ಧಾರವಾಡಕರ ಅಭಿಮತ ವ್ಯಕ್ತಪಡಿಸಿದರು.
ದಾಸ ಸಾಹಿತ್ಯ ಅಕಾಡೆಮಿಯು ಜಯತೀರ್ಥ ನಗರದ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ಬುಧವಾರ ಆಯೋಜಿಸಿದ ಪತ್ರಕರ್ತರಾದ ಶಾಮ್ ಸುಂದರ ಕುಲಕರ್ಣಿ ರಚಿಸಿದ ಗೀತಾ ಸಾರ ಪುಸ್ತಕ ಬಿಡುಗಡೆಗೊಳಿಸಿದ ಅವರು ಭಗವದ್ಗೀತೆಯನ್ನು ಅಧ್ಯಯನ ಮಾಡಿ ಎಲ್ಲರಿಗೂ ಸುಲಭವಾಗಿ ತಿಳಿಯುವಂತೆ ಲೇಖನ ಮಾಲಿಕೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡುವ ಮೂಲಕ ಲಕ್ಷಾಂತರ ಜನರಿಗೆ ಗೀತೆಯ ಸಂದೇಶವನ್ನು ತಲುಪಿಸಿದ್ದಾರೆ.
ಪ್ರತಿದಿನದ ಲೇಖನ ಸಂಗ್ರಹಿಸಿ ಪುಸ್ತಕದ ರೂಪದಲ್ಲಿ ಹೊರ ತಂದಿರುವುದು ಶ್ಲಾಘನೀಯ ,ಭಗವದ್ಗೀತೆಯ ಬಗ್ಗೆ ಎಷ್ಟು ತಿಳಿದುಕೊಂಡರು ಸಾಲದು, ಉತ್ತಮ ಮಾಹಿತಿಯನ್ನೊಳಗೊಂಡ ಪುಸ್ತಕ ಇದಾಗಿದೆ ಎಂದು ದಿವ್ಯ ಸಾನಿಧ್ಯ ವಹಿಸಿದ ಪಂಡಿತ ಗೋಪಾಲ್ ಆಚಾರ್ಯ ರು ಆಶೀರ್ವದಿಸಿದರು.
ವ್ಯಾಸರಾಜ ಸಂತೇಕೆಲೂರ ಅವರು ಪುಸ್ತಕದ ಪರಿಚಯ ಮಾಡಕೊಟ್ಟರು. ದಾಸ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾದ ರವಿ ಲಾರರಕರ, ಬಾಲಕೃಷ್ಣ ಲಾತೂರಕರ ವೇದಿಕೆ ಉಪಸ್ತಿತರಿದ್ದರು.