spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, January 17, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜನರಲ್ ರಾವತ್ ಸಾವಿಗೆ ಸಂಭ್ರಮಿಸಿದ ವಿಕೃತ, ವಿದ್ರೋಹಿಗಳಿವರು!

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್

ದೇಶ ಸೇನಾ ಮುಖ್ಯಸ್ಥರನ್ನು ಕಳೆದುಕೊಂಡಿದೆ. ಆದರೆ ಇಂತಹ ಅಪಘಾತಗಳು ಮತ್ತು ಸೇನಾ ಅಧಿಕಾರಿಗಳ ಸಾವಿಗೂ ಇಸ್ಲಾಮಿಸ್ಟ್‌ಗಳು ಹಾಗೂ ಕಾಂಗ್ರೆಸ್ ನೌಕರರು ಅವಹೇಳನಕಾರಿ ಮತ್ತು ಸಂವೇದನಾ ರಹಿತವಾಗಿ ಪ್ರತಿಕ್ರಿಯೆ ನೀಡಿರುವ ದುರಂತವೂ ನಮ್ಮ ನಡುವೆ ಇದೆ.

ಮಿಲಿಟರಿ ಹೆಲಿಕಾಪ್ಟರ್ ಪತನವಾದ ತಕ್ಷಣ ಹಲವರು ಬದುಕುಳಿದಿದ್ದಾರೆ ಎಂಬ ಮಾಹಿತಿ ಬಂದಿತ್ತು. ಬದುಕುಳಿದವರಿಗಾಗಿ ಪ್ರಾರ್ಥಿಸಲು ಭಾರತವು ಒಟ್ಟುಗೂಡಿದರೆ, ಕೆಲವು ಇಸ್ಲಾಮಿಸ್ಟ್‌ಗಳು ತಮ್ಮ ನಿಜವಾದ ಬಣ್ಣವನ್ನು ತೋರಿಸಲು ಪ್ರಾರಂಭಿಸಿದ್ದರು. ಈ ಆಘಾತಕಾರಿ ಸುದ್ದಿ ಬಹಿರಂಗವಾಗುತ್ತಲೇ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂತೋಷಪಟ್ಟಿದ್ದಾರೆ.

ಪಾಕಿಸ್ತಾನದ ಪೇಶಾವರದ ಟ್ವಿಟ್ಟರ್ ಬಳಕೆದಾರ ಜೀಶಾನ್ ಅಫ್ರಿದಿ, ಜನರಲ್ ರಾವತ್ ಬದುಕುಳಿದಿದ್ದಕ್ಕಾಗಿ ದುಃಖಿತನಾಗಿದ್ದೇನೆ ಎಂದು ಹೇಳಿದ್ದ.

ಪತ್ರಕರ್ತ ಮತ್ತು ಕಾಂಗ್ರೆಸ್ ಪಕ್ಷದ ಮುಖವಾಣಿಯಾಗಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಸುದ್ದಿ ಸಂಪಾದಕ ಆಶ್ಲಿನ್ ಮ್ಯಾಥ್ಯೂ ‘ಡಿವೈನ್ ಇಂಟರ್‌ವೆನ್ಷನ್’ ಎಂಬ ಟ್ವೀಟ್ ಅನ್ನು ಪೋಸ್ಟ್ ಮಾಡಿ, ಅದನ್ನು ನಂತರ ಡಿಲಿಟ್ ಮಾಡಿದ್ದಾರೆ. ಅಂದರೆ, ದೇವರೇ ಬಂದು ರಾವತ್ ಅವರನ್ನು ಮುಗಿಸಿದ್ದಾನೆ ಎಂಬರ್ಥದಲ್ಲಿ.

ಟ್ವಿಟರ್ ಬಳಕೆದಾರ ಪಾಶಾ ಎಂಬಾತ ಇದನ್ನು ಗಿಫ್ ನೊಂದಿಗೆ ಒಳ್ಳೆಯ ಸುದ್ದಿ ಎಂದು ಹೇಳಿದ್ದಾನೆ.

ಪಾಕಿಸ್ತಾನದ ಇಸ್ಲಾಮಾಬಾದ್‌ನ ಜಾರ್‌ನಿಯಾಜ್ ಎಂಬಾತ ಟ್ವಿಟರ್‌ನಲ್ಲಿ ಅಪಘಾತವನ್ನು ಅಪಹಾಸ್ಯ ಮಾಡುತ್ತಾ ಮೀಮ್ ಅನ್ನು ಪೋಸ್ಟ್ ಮಾಡಿದ್ದಾನೆ. ಆತ ತನ್ನ ಟ್ವಿಟ್ಟರ್ ಬಯೋದಲ್ಲಿ ನಾನು ಮುಸ್ಲಿಂ ಮತ್ತು ಹಿಂದುತ್ವದ ಅಭಿಮಾನಿಯಲ್ಲ ಎಂದು ಹೇಳಿಕೊಂಡಿದ್ದು, ರಾವತ್ ಅವರ ಸ್ಥಾನವನ್ನು ಬೇರೊಬ್ಬರು ತುಂಬುತ್ತಾರೆ ಎಂಬುದನ್ನು ಹೊರತುಪಡಿಸಿ, ದುಃಖಿಸಲು ಯಾವುದೇ ಕಾರಣವಿಲ್ಲ ಎಂದಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೇ ಇದು ತಮಗೆ ಮಿನಿ ಈದ್ ಇದ್ದಂತೆ ಎಂದೂ ಘೋಷಿಸಿದ್ದಾನೆ.

ಇನ್ನಷ್ಟು ಮಂದಿ ತಮ್ಮ ವಿಕೃತವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ. ತಾವೆಷ್ಟು ಸಂವೇದನಾರಹಿತರು, ಇಂತಹ ದುಃಖಿತ ಘಟನೆಯನ್ನು ಕೂಡ ಎಷ್ಟು ಸಂಭ್ರಮಿಸಬಲ್ಲೆವು ಎಂಬುದನ್ನು ತೋರಿಸುತ್ತಿದ್ದಾರೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss