Wednesday, August 10, 2022

Latest Posts

ಕೊರೋನಾದಿಂದ ಸಂಕಷ್ಟದಲ್ಲಿ ಜನರಿಗೆ ಜಿಯೋ ಭರ್ಜರಿ ಗಿಫ್ಟ್: ತಿಂಗಳಿಗೆ 300 ನಿಮಿಷಗಳ ಕರೆ ಉಚಿತ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾದಿಂದ ಸಂಕಷ್ಟದಲ್ಲಿ ರೀಚಾರ್ಚ್ ಮಾಡಲು ಸಾಧ್ಯವಾಗದ ಬಳಕೆದಾರರಿಗೆ ಜಿಯೋ ಭರ್ಜರಿ ಗಿಫ್ಟ್ ನೀಡಿದ್ದು, ಕೊರೋನಾ ಅವಧಿಯಲ್ಲಿ ತಿಂಗಳಿಗೆ 300 ನಿಮಿಷಗಳ ಉಚಿತ ಕರೆಗಳನ್ನು (ದಿನಕ್ಕೆ 10 ನಿಮಿಷ) ಸೇರಿ ಹಲವು ಆಫರ್​ಗಳನ್ನು ನೀಡಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ, ಜಿಯೋ ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಆಫರ್​ಗಳನ್ನು ನೀಡಲಾಗಿದೆ. ರಿಲಯನ್ಸ್ ಫೌಂಡೇಶನ್​ನೊಂದಿಗೆ ಕೆಲಸ ಮಾಡುತ್ತಿರುವ ಜಿಯೋ, ಸಾಂಕ್ರಾಮಿಕ ರೋಗದ ಸಂಪೂರ್ಣ ಅವಧಿಗೆ ತಿಂಗಳಿಗೆ 300 ನಿಮಿಷ ಹೊರ ಹೋಗುವ ಕರೆಗಳನ್ನು (Out going calls) ಉಚಿತವಾಗಿ ನೀಡುತ್ತಿದೆ.
ಈಗಾಗಲೇ ರೀಚಾರ್ಜ್ ಮಾಡಿರುವವರಿಗೆ ಹೆಚ್ಚುವರಿ ಯೋಜನೆ ಒದಗಿಸಲಾಗುವುದು. ಅಂದರೆ ನೀವು 75 ರೂಪಾಯಿ ರೀಚಾರ್ಜ್ ಮಾಡಿದರೆ, ಯಾವುದೇ ಹಣ ಕಟ್ ಆಗದೆ 75 ರೂಪಾಯಿಯೂ ನಿಮ್ಮ ಮೊಬೈಲ್​ಗೆ ಜಮೆಯಾಗುತ್ತದೆ. ಈ ಕೊಡುಗೆ ವಾರ್ಷಿಕ ರೀಚಾರ್ಜ್ ಹಾಗೂ ಜಿಯೋಫೋನ್​​​ ಸಾಧನಗಳಿಗೆ ಕಂತು ಕಟ್ಟುವುದಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳಿಕೆ ಸ್ಪಷ್ಟೀಕರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss