spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜರ್ಮನಿಯಲ್ಲಿ ಲಸಿಕೆ ತೆಗೆದುಕೊಳ್ಳದವರ ಮೇಲೆ ಲಾಕ್ಡೌನ್ ರೀತಿಯ ನಿಯಮಗಳು

- Advertisement -Nitte

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ಜರ್ಮನಿಯಲ್ಲಿ ಕೋವಿಡ್-‌19 ಲಸಿಕೆ ಪಡೆಯಲು ಜನ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅಲ್ಲಿನ ಸರ್ಕಾರ ಮಹತ್ವ ನಿರ್ಧಾರಕ್ಕೆ ಮುಂದಾಗಿದ್ದು, ಮುಂದಿನ ತಿಂಗಳಿನಿಂದ ವ್ಯಾಕ್ಸಿನೇಷನ್‌ ಕಡ್ಡಾಯಗೊಳಿಸಲಿದೆ ಮತ್ತು  ಲಸಿಕೆ ತೆಗೆದುಕೊಳ್ಳದವರ ಮೇಲೆ  ಲಾಕ್ಡೌನ್ ರೀತಿಯ ನಿಯಮಗಳನ್ನು ಜಾರಿಗೊಳಿಸಲಿದೆ.

ಕೋವಿಡ್ ಲಸಿಕೆ ತೆಗೆದುಕೊಳ್ಳದವರಿಗೆ ಸೂಪ‌ರ್‌ ಮರ್ಕೆಟ್‌  ಮತ್ತು ಔಷಧಾಲಯಗಳಂತಹ ಅಗತ್ಯ ಸ್ಥಳಗಳಲ್ಲಿಯೂ ಪ್ರವೇಶ ನಿಷೇಧಿಸಲಾಗುವುದು ಎಂದು  ಚಾನ್ಸೆಲರ್ ಏಂಜೆಲಾ ಮರ್ಕೆಲ್ ಮತ್ತು ಅವರ ಉತ್ತರಾಧಿಕಾರಿ ಓಲಾಫ್ ಸ್ಕೋಲ್ಜ್ ಅವರು ಪ್ರಾದೇಶಿಕ ನಾಯಕರೊಂದಿಗೆ ಕೋವಿಡ್‌ ಬಿಕ್ಕಟ್ಟು ನಿರ್ವಹಣೆ ಸಭೆಯಲ್ಲಿ ಘೋಷಿಸಿದ್ದಾರೆ.

ಚಾನ್ಸೆಲರ್ ಏಂಜೆಲಾ ಮತ್ತು  ಓಲಾಫ್ ಸ್ಕೋಲ್ಜ್ ಕಡ್ಡಾಯ ವ್ಯಾಕ್ಸಿನೇಷನ್‌ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು, ಸಂಸತ್ತಿನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರೆ ಫ್ರೆಬ್ರವರಿಯಿಂದ  ಇದು ಜಾರಿಗೆ ಬರಬಹುದು ಎನ್ನಲಾಗಿದೆ.

ಜಾರಿಯಾಗಲಿರುವ ಕೋವಿಡ್‌ ಕಠಿಣ ನಿಯಮಗಳ ಅಡಿಯಲ್ಲಿ,”ಲಸಿಕೆ ತೆಗೆದುಕೊಳ್ಳದವರು ತಮ್ಮ ಮನೆ ಬಿಟ್ಟು ಬೇರೆವೆಯರ ಮನೆಯಲ್ಲಿ ಕೇವಲ ಇಬ್ಬರನ್ನು ಮಾತ್ರ ಭೇಟಿ ಮಾಡಬಹುದು. ಹಾಗೇಯೇ  1 ಲಕ್ಷ ಜನರಿರು ಪ್ರದೇಶದಲ್ಲಿ ಒಂದು ವಾರದಲ್ಲಿ 350ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ದಾಖಲಾದರೆ ಆ ಪ್ರದೇಶದ ಬಾರ್‌ಗಳು ಮತ್ತು ನೈಟ್‌ಕ್ಲಬ್‌ಗಳನ್ನು ಮುಚ್ಚಬೇಕು ಮತ್ತು ಸಾಕರ್ ಪಂದ್ಯಗಳಂತಹ ದೊಡ್ಡ ಪಂದ್ಯಗಳಲ್ಲಿ ಪ್ರೇಕ್ಷಕ ಸಂಖ್ಯೆಯನ್ನು ಮಿತಗೊಳಿಸಬೇಕು”

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss