ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಸ್ಯಹಾರಿ ಆಹಾರ ತಿನ್ನುವ ಎಷ್ಟೋ ಮಂದಿ ಈಗಲೂ ನಾನ್ವೆಜ್ ಅಡುಗೆ ಮಾಡಿದ ಪಾತ್ರೆಯಲ್ಲಿ ಬೇಯಿಸಿದ ಆಹಾರ ಕೂಡ ತಿನ್ನೋದಿಲ್ಲ. ಆದರೆ ಹೊಟೇಲ್ ಒಂದರಿಂದ ತರಿಸಿದ ವೆಜ್ ಬಿರಿಯಾನಿಯಲ್ಲಿ ಮೂಳೆಗಳು ಸಿಕ್ಕಿದ್ದು, ಗ್ರಾಹಕ ಶಾಕ್ ಆಗಿದ್ದಾನೆ.
ಹೌದು,ಮಧ್ಯಪ್ರದೇಶದ ಇಂದೋರ್ನ ರೆಸ್ಟೋರೆಂಟ್ ಒಂದರ ಮೇಲೆ ಗ್ರಾಹಕರು ದೂರು ದಾಖಲಿಸಿದ್ದಾರೆ. ಸಸ್ಯಹಾರಿ ಆಹಾರದಲ್ಲಿ ಮಾಂಸಾಹಾರ ಪತ್ತೆಯಾಗಿದ್ದು, ದೂರುದಾರ ಆಕಾಶ್ ದುಬೆ ಕಂಪ್ಲೆಂಟ್ ನೀಡಿದ್ದಾರೆ.
ರೆಸ್ಟೋರೆಂಟ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಅವರನ್ನು ಕ್ಷಮೆಯಾಚಿಸಿದ್ದಾರೆ. ಆದರೂ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.