ಮಾಡುವ ವಿಧಾನ
ಮೊದಲು ಎರಡು ಸ್ಪೂನ್ ಕಾಫಿಪುಡಿಗೆ ಬಿಸಿ ನೀರು ಹಾಕಿ ಡಿಕಾಕ್ಷನ್ ತಯಾರಿಸಿ
ನಂತರ ಅದೇ ಬಿಸಿನೀರನ್ನು ಡಿಕಾಕ್ಷನ್‌ಗೆ ಆಡ್ ಮಾಡಿ, ನಿಮಗೆ ಬೇಕಾದ ಹದಕ್ಕೆ ತಯಾರಿಸಿಕೊಳ್ಳಿ
ಬೇಕಿದ್ದಲ್ಲಿ ಇದಕ್ಕೆ ಸಕ್ಕರೆ ಕ್ಯೂಬ್ಸ್ ಹಾಕಿ, ಇಲ್ಲವಾದರೆ ಹಾಗೆ ಬಿಡಿ
ನಂತರ ಇದಕ್ಕೆ ಒಂದು ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿ ಬಿಸಿ ಬಿಸಿ ಕುಡಿಯಿರಿ
ಏನು ಲಾಭ?
ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಇದು ಹಸಿವನ್ನು ತಪ್ಪಿಸಿ, ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಕ್ಯಾಲೊರಿಗಳನ್ನು ಕಡಿಮೆ ಮಾಡಿ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ತುಪ್ಪವು ಬ್ಯುಟರಿಕ್ ಆಮ್ಲವನ್ನು ಹೊಂದಿರುವುದರಿಂದ ಮುಂಜಾನೆ ತುಪ್ಪದ ಕಾಫಿಯು ಮೆದುಳಿನ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ. ತುಪ್ಪದ ಕಾಫಿ ಜೀರ್ಣಕ್ರಿಯೆ ಹಾಗೂ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಅದಲ್ಲದೇ, ಹೊಟ್ಟೆ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ.