ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಗುಲಾಮ್‌ ನಬಿ ಆಜಾದ್‌ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನೂತನ ಅಧ್ಯಕ್ಷರಿಗಾಗಿ ಚುನಾವಣೆಯನ್ನು ಕಾಂಗ್ರೆಸ್‌ ಪಕ್ಷವು ಮುಂದೂಡಿದ ಬೆನ್ನಲ್ಲೇ ಇದೀಗ ಪಕ್ಷದ ಪಾಲಿಗೆ ಮತ್ತೊಂದು ಆಘಾತ ಎದುರಾಗಿದೆ. ಪಕ್ಷದ ಹಿರಿಯ ಮುಖಂಡ ಹಾಗೂ ಒಂದು ಕಾಲದಲ್ಲಿ ಪಕ್ಷದ ವರ್ಚಸ್ವೀ ನಾಯಕರಲ್ಲಿ ಒಬ್ಬರಾಗಿದ್ದ ಕಾಶ್ಮೀರದಿಂದ ಪಕ್ಷವನ್ನು ಪ್ರತಿನಿಧಿಸಿದ್ದ ಗುಲಾಂ ನಬೀ ಆಜಾದ್‌ ಅವರು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಆಗಸ್ಟ್ 16 ರಂದು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ಆಜಾದ್ ರಾಜೀನಾಮೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.

ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಐದು ಪುಟಗಳ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿರುವ ಗುಲಾಂ ನಬೀ ಅವರು ಪಕ್ಷದೊಂದಿಗಿನ ತಮ್ಮ ಸುದೀರ್ಘ ಒಡನಾಟ ಮತ್ತು ಇಂದಿರಾ ಗಾಂಧಿ ಅವರೊಂದಿಗಿನ ನಿಕಟ ಸಂಬಂಧವನ್ನು ವಿವರಿಸಿದ್ದಾರೆ. ತಮ್ಮ ವಿವರವಾದ ರಾಜೀನಾಮೆ ಪತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ‘ಹಿಂತಿರುಗುವುದಿಲ್ಲ’ ಎಂಬ ಹಂತವನ್ನು ತಲುಪಿದೆ ಎಂದು ಉಲ್ಲೇಖಿಸಿದ್ದಾರೆ.

“ಇಡೀ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಯು ಒಂದು ಪ್ರಹಸನ ಮತ್ತು ನೆಪವಾಗಿದೆ. ದೇಶದಲ್ಲಿ ಎಲ್ಲಿಯೂ ಯಾವುದೇ ಸಂಘಟನೆಯ ಯಾವುದೇ ಹಂತದ ಚುನಾವಣೆಗಳು ನಡೆದಿಲ್ಲ. ಎಐಸಿಸಿಯ ಕೈಯಿಂದ ಆಯ್ಕೆಯಾದ ಲೆಫ್ಟಿನೆಂಟ್‌ಗಳು ಈಗಾಗಲೇ ಒಂದು ಕೂಟವು ಸಿದ್ಧಪಡಿಸಿದ ಪಟ್ಟಿಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಗಿದೆ. ಎಐಸಿಸಿ 24 ಅಕ್ಬರ್ ರಸ್ತೆಯಲ್ಲಿ ಕುಳಿತಿದೆ” ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಗುಲಾಂ ನಬೀ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!