ಲೈವ್‌ ಶೋನಲ್ಲಿ ಉರುಳಿದ ಎಲ್‌ಇಡಿ ಪರದೆ, ನೃತ್ಯ ಸ್ಪರ್ಧಿಗಳಿಗೆ ಗಾಯ:ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಲೈವ್ ಶೋಗಳಲ್ಲಿ ಆಗೊಮ್ಮೆ ಈಗೊಮ್ಮೆ ಅಪಘಾತಗಳು ಸಂಭವಿಸುತ್ತವೆ. ಇತ್ತೀಚೆಗೆ ಪ್ರದರ್ಶನಗಳಲ್ಲಿ ಬಳಸುವ ಎಲ್‌ಇಡಿ ಪರದೆಗಳಿಗೆ ಸಂಬಂಧಿಸಿದಂತೆ ಅನೇಕ ಅಪಘಾತಗಳು ನಡೆಯುತ್ತಿವೆ. ಹಾಂಕಾಂಗ್‌ನಲ್ಲಿ ಕೂಡಾ ಇಂತಹದ್ದೇ ಅಪಘಾತ ಸಂಭವಿಸಿದೆ. ಗುರುವಾರ ಸಂಜೆ ಹಾಂಗ್ ಕಾಂಗ್‌ನ ಕ್ರೀಡಾಂಗಣದಲ್ಲಿ ಪಾಪ್ ಬ್ಯಾಂಡ್ ಮಿರರ್ ಪ್ರದರ್ಶನವಿತ್ತು. ಈ ಪ್ರದರ್ಶನಕ್ಕಾಗಿ ವೇದಿಕೆಯಲ್ಲಿ ಅಳವಡಿಸಿದ್ದ ಬೃಹತ್ ಎಲ್ಇಡಿ ಪರದೆ ನೆಲಕ್ಕೆ ಉರುಳಿರುವ ವಿಡಿಯೋ ವೈರಲ್‌ ಆಗಿದೆ.

ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದ ನೃತ್ಯಗಾರರ ಮೇಲೆ ಎಲ್‌ಇಡಿ ಪರದೆ ಬಿದ್ದಿದ್ದರಿಂದ ಘಟನೆಯಲ್ಲಿ ಇಬ್ಬರು ನೃತ್ಯಗಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಭದ್ರತಾ ಕಾರಣಗಳಿಂದಾಗಿ ಕ್ರೀಡಾಂಗಣದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!