ಕುಸಿದ ಟೀಮ್ ಇಂಡಿಯಾಕ್ಕೆ ಆಸರೆಯಾದ ಗಿಲ್: ನ್ಯೂಜಿಲ್ಯಾಂಡ್​ ಗೆ ಬೃಹತ್ ಟಾರ್ಗೆಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪಾಲಿಗೆ ಶುಭಮನ್​ ಗಿಲ್(208)​ ವರವಾಗಿದ್ದು, ಅತ್ಯಾಕರ್ಷಕ ದ್ವಿಶತಕದ ನೆರವಿನಿಂದ ಟೀಮ್​ ಇಂಡಿಯಾ ಪ್ರವಾಸಿ 349 ರನ್​ ಗಳಿಸಿ ಸವಾಲೊಡ್ಡಿದೆ.

ಹೈದರಾಬಾದ್​ನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 349 ರನ್​ ಗಳಿಸಿದೆ. ಎದುರಾಳಿ ನ್ಯೂಜಿಲ್ಯಾಂಡ್​ ಗೆಲುವಿಗೆ 350 ರನ್​ ಟಾರ್ಗೆಟ್ ನೀಡಿದೆ.
ನಾಯಕ ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ ಉತ್ತಮ ಆರಂಭ ಒದಗಿಸಿದರು. ಆದರೆ ರೋಹಿತ್​ ಶರ್ಮಾ 34 ರನ್​ ಗಳಿಸಿದ ವೇಳೆ ಬ್ಲೇರ್‌ ಟಿಕ್ನರ್‌ ಎಸೆತದಲ್ಲಿ ಔಟ್​ ಆದರು.

ಬಳಿಕ ಬಂದ ವಿರಾಟ್​ ಕೊಹ್ಲಿ(8) ಹೆಚ್ಚು ಕಾಲ ಕ್ರೀಸ್​ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾದರು. ಇಶಾನ್‌ ಕಿಶನ್‌(5) ಕೂಡ ವಿಕೆಟ್​ ಒಪ್ಪಿಸಿದರು.

110 ಆಗುವ ವೇಳೆ ಪ್ರಮುಖ ಆಟಗಾರರ ವಿಕೆಟ್​ ಪತನಗೊಂಡ ಈ ವೇಳೆ ಭಾರತ ಕ್ಕೆ ಜವಾಬ್ದಾರಿಯುವಾಗಿ ಬ್ಯಾಟಿಂಗ್​ ನಡೆಸಿದ ಶುಭಮನ್​ ಗಿಲ್​ ಆಸರೆಯಾದರು. ಸೂರ್ಯಕುಮಾರ್​ ಯಾದವ್​(31), ಹಾರ್ದಿಕ್​ ಪಾಂಡ್ಯ(28) ರನ್​ ಗಳಿಸಿದರು.
ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಮತ್ತೊಂದು ಕಡೆ ಶುಭಮನ್​ ಗಿಲ್​ ಆತ್ಮವಿಶ್ವಾಸದಿಂದ ಬ್ಯಾಟ್​ ಬೀಸುವ ಮೂಲಕ ಕಿವೀಸ್​ ಬೌಲರ್​ಗಳ ಕಿವಿ ಹಿಂಡಿದರು.

ಗಿಲ್​ ಒಟ್ಟು 149 ಎಸೆತ ಎದುರಿಸಿ 208 ರನ್​ ಪೇರಿಸಿದರು. ಈ ಸ್ಫೋಟಕ ಇನಿಂಗ್ಸ್​ ವೇಳೆ ಬರೋಬ್ಬರಿ 19 ಬೌಂಡರಿ ಮತ್ತು 9 ಸಿಕ್ಸರ್​ ಬಾರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!