ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ 2023ರ ಸೆಮಿಫೈನಲ್ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ, ಆರಂಭಿಕ ಬ್ಯಾಟ್ಸ್ಮನ್ಗಳಾದ ರೋಹಿತ್ ಹಾಗೂ ಶುಭಮನ್ ಉತ್ತಮ ಸ್ಟಾರ್ಟ್ ತಂದುಕೊಟ್ಟರು. ಈ ವೇಳೆ 79 ರನ್ ಗಳಿಸಿದ್ದ ಗಿಲ್ ರಿಟೈರ್ಡ್ ಹರ್ಟ್ ಆಗುವ ಮೂಲಕ ಪೆವಿಲಿಯನ್ ಹಾದಿ ಹಿಡಿದರು.
ಈ ವೇಳೆ ಗಿಲ್ ಪರ ಟ್ವೀಟ್ ಮಾಡಿದ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ , ‘ಕಮ್ಬ್ಯಾಕ್ ಮೋರ್ ಸ್ಟ್ರಾಂಗರ್’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಪಂದ್ಯದ ಮಧ್ಯೆ ರನ್ಗಾಗಿ ಓಡುವಾಗ ಕಾಲು ನೋವು ಕಾಣಿಸಿಕೊಂಡ ಕೂಡಲೇ ಕೆಲ ಸಮಯ ನೆಲದ ಮೇಲೆ ಕುಳಿತು ವಿಶ್ರಾಂತಿಸಿದ ಗಿಲ್, ತದನಂತರ ಪಂದ್ಯವನ್ನು ಮುಂದುವರಿಸಲು ಆಗುವುದಿಲ್ಲ ಎಂಬುದನ್ನು ಖಚಿತಪಡಿಸಿ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ನತ್ತ ಸಾಗಿದರು. ಈ ವೇಳೆ ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿದ್ದ ಸಾರಾ ತೆಂಡೂಲ್ಕರ್ ಶುಭಮನ್ ಗಿಲ್ ಗಾಯಗೊಂಡ ಬೆನ್ನಲ್ಲೇ ‘ಕಮ್ಬ್ಯಾಕ್ ಮೋರ್ ಸ್ಟ್ರಾಂಗರ್’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಸಾರಾ ಮಾಡಿದ ಟ್ವೀಟ್ ಹೆಚ್ಚಿನ ಲೈಕ್ ಮತ್ತು ರೀ-ಟ್ವೀಟ್ ಆಗಿದ್ದು, ಶುಭಮನ್ ಶೀಘ್ರ ಚೇತರಿಕೆಗೆ ಕ್ರಿಕೆಟ್ ಅಭಿಮಾನಿಗಳು ಹಾರೈಸಿದರು.