ಶುಂಠಿ ಅಡುಗೆಗೆ ಹಾಕಿದರೆ ಅದರ ರುಚಿಯೇ ಬೇರೆ. ಹಾಗೆಯೇ ಆರೋಗ್ಯದಲ್ಲಿಯೂ ಶುಂಠಿ ಬಹಳ ಉಪಕಾರಿ. ಪ್ರತಿ ದಿನ ಶುಂಠಿಯನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಬದಲಾವಣೆ ಕಾಣಬಹುದು. ಅದೇ ನೀವು ಹಾಗೇ ಶುಂಠಿ ಸೇವಿಸುವ ಬದಲು ಉಪ್ಪಿನ ಜೊತೆ ಶುಂಠಿಯನ್ನು ಸೇವಿಸಿದರೆ ಆರೋಗ್ಯ ಮತ್ತಷ್ಟು ವೃದ್ಧಿಯಾಗುತ್ತದೆ. ಏನೆಲ್ಲ ಬದಲಾವಣೆ ನೋಡಿ…
ಗ್ಯಾಸ್:
ಗ್ಯಾಸ್ ಸಮಸ್ಯೆ ಇದ್ದರೆ ಹೊಟ್ಟೆನೋವು ಬರುತ್ತದೆ. ಉಸಿರಾಟಕ್ಕೆ ಸಂಬಂಧಿಸಿದಂತೆ ತೊಂದರೆ ಆಗುತ್ತದೆ. ಅಂತಹ ಸಮಯದಲ್ಲಿ ಚಿಕ್ಕ ಚಿಕ್ಕ ಶುಂಠಿಯನ್ನು ಉಪ್ಪಿನ ಜತೆ ಸೇರಿಸಿಕೊಂಡು ಜಗಿದು ಸೇವಿಸಿದೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ.
ಹಸಿವು:
ಒಮ್ಮೊಮ್ಮೆ ತುಂಬಾ ತಿನ್ನಬೇಕೆನಿಸುತ್ತದೆ. ಆದರೆ ಹಸಿವು ಇರುವುದಿಲ್ಲ. ಹಾಗಿದ್ದಲ್ಲಿ ಶುಂಠಿ ಕಷಾಯವನ್ನು ಸೇವಿಸಿ. ಶುಂಠಿ, ಉಪ್ಪು ಹಾಕಿ ನೀರಿನಲ್ಲಿ ಕುದಿಸಿಕೊಂಡು ಅದಕ್ಕೆ ಲಿಂಬು ರಸ ಹಿಂಡಿಕೊಂಡು ಸೇವಿಸಿದರೆ ಹಸಿವು ಬೇಗ ಆಗುತ್ತದೆ.
ಅಜೀರ್ಣ:
ಅಜೀರ್ಣ ಆಗಿ ವಾಂತಿ ಬಂದಂತಾಗುತ್ತಿದ್ದರೆ ಒಂದು ಚಮಚ ಶುಂಠಿ ರಸಕ್ಕೆ ಉಪ್ಪು ಸೇರಿಸಿಕೊಂಡು ಸೇವಿಸಿ.
ಜೀರ್ಣ:
ಊಟದ ನಂತರ ಒಂದು ಕಪ್ ಮಜ್ಜಿಗೆಗೆ, ಶುಂಠಿ ಮತ್ತು ಉಪ್ಪು ಸೇರಿಸಿಕೊಂಡು ಕುಡಿಯಿರಿ. ಊಟ ಸರಿಯಾಗಿ ಜೀರ್ಣವಾಗುತ್ತದೆ.
ತಲೆನೋವು:
ತಲೆ ನೋವು ಬಂದಾಗ ಶುಂಠಿ ಕಷಾಯ ಸೇವಿಸಿ. ಶುಂಠಿಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಆ ನೀರಿಗೆ ಉಪ್ಪು ಹಾಕಿಕೊಂಡು ಕುಡಿಯಿರಿ. ಪಿತ್ತ, ಗ್ಯಾಸ್ ನಿಂದ ಬರುವಂತಹ ತಲೆ ನೋವು ನಿವಾರಣೆಯಾಗುತ್ತದೆ.
ಹುಳಿ ತೇಗು:
ಹುಳಿ ತೇಗು ಬಂದು ಎದೆ ಉರಿ ಆಗುತ್ತಿದ್ದರೆ ತಕ್ಷಣ ಶುಂಠಿಯನ್ನು ಉಪ್ಪಿನ ಜೊತೆ ಅಗೆದು ತಿನ್ನಿ. ಹುಳಿ ತೇಗು ನಿಲ್ಲುತ್ತದೆ.