Wednesday, August 17, 2022

Latest Posts

ಸರಿಯಾಗಿ ಜೀರ್ಣವಾಗಬೇಕೆಂದರೆ ದಿನವೂ ಶುಂಠಿ ತಂಬುಳಿ ಊಟ ಮಾಡಿ…ಈಸಿ ರೆಸಿಪಿ ನಿಮಗಾಗಿ

ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು, ಊಟ ಮಾಡಿದ್ದು ಸರಿಯಾಗಿ ಜೀರ್ಣವಾಗದೇ ಇರುವವರು ದಿನವೂ ಶುಂಠಿ ತಂಬುಳಿ ಊಟ ಮಾಡಿ. ಮಾಡುವುದಕ್ಕೂ ಈಸಿ, ಊಟಕ್ಕೂ ರುಚಿ. ಹೇಗೆ ಮಾಡುವುದು ನೋಡಿ..

ಬೇಕಾಗುವ ಸಾಮಗ್ರಿ:

ಶುಂಠಿ
ಮಜ್ಜಿಗೆ
ಕಾಯಿ ತುರಿ
ಎಳ್ಳು
ಎಣ್ಣೆ
ಸಾಸಿವೆ
ಉದ್ದಿನಬೇಳೆ
ಕರಿ ಬೇವಿನ ಸೊಪ್ಪು
ಉಪ್ಪು
ಸಕ್ಕರೆ\ ಬೆಲ್ಲ

ಮಾಡುವ ವಿಧಾನ:

  • ಮೊದಲಿಗೆ ಶುಂಠಿಯ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
  • ಅದನ್ನು ಅರ್ಧ ಕಪ್ ಕಾಯಿತುರಿಯೊಂದಿಗೆ ರುಬ್ಬಿಕೊಳ್ಳಿ. ಆ ನಂತರ ಅದಕ್ಕೆ ಒಂದು ಲೋಟ ಮಜ್ಜಿಗೆಯನ್ನು ಹಾಕಿ ಆಮೇಲೆ ಉಪ್ಪು, ಸ್ವಲ್ಪ ಸಕ್ಕರೆ ಹಾಕಿ.
  • ಇದಕ್ಕೆ ಒಗ್ಗರಣೆ ಹಾಕಬೇಕು. ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕರಿಬೇವಿನ ಸೊಪ್ಪಿನ ಒಗ್ಗರಣೆ ಹಾಕಿದರೆ ಶುಂಠಿ ತಂಬುಳಿ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!