ಚಾಲೆಂಜ್‌ನಲ್ಲಿ ಗೆಲ್ಲೋಕೆ ಸಿಕ್ಕಾಪಟ್ಟೆ ಐರನ್ ಟ್ಯಾಬ್ಲೆಟ್ ತಿಂದು ಬಾಲಕಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾಲೆಯಲ್ಲಿ ಮಕ್ಕಳು ಬೆಟ್ ಕಟ್ಟಿ ತಮಾಷೆಗಾಗಿ ಲೆಕ್ಕವಿಲ್ಲದಷ್ಟು ಐರನ್ ಮಾತ್ರೆಗಳನ್ನು ಸೇವಿಸಿದ್ದು, ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.
ಊಟಿಯ ಶಾಲೆಯೊಂದರಲ್ಲಿ13 ವರ್ಷದ ಬಾಲಕಿ ಚಾಲೆಂಜ್‌ನಲ್ಲಿ ಗೆಲ್ಲೋದಕ್ಕೆ ಕಬ್ಬಿಣಾಂಶ ಹಾಗೂ ಫೋಲಿಕ್ ಮಾತ್ರೆಗಳನ್ನು ಅತಿಯಾಗಿ ಸೇವಿಸಿ ಮೃತಪಟ್ಟಿದ್ದಾರೆ. ಇನ್ನೊಬ್ಬ ಬಾಲಕಿಯ ಸ್ಥಿತಿಯೂ ಗಂಭೀರವಾಗಿದೆ.

ಸಪ್ಲಿಮೆಂಟ್‌ಗಳ ಅತಿಯಾದ ಸೇವನೆಯಿಂದ ಯಕೃತ್ ವೈಫಲ್ಯ ಸಂಭವಿಸಿದ್ದು, ಇದರಿಂದಾಗಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಮಾತ್ರೆ ಕುಡಿದು ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಬೇರೆ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಬಾಲಕಿ ಮೃತಪಟ್ಟಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ.
ಮಕ್ಕಳ ಬಳಿ ಅಷ್ಟೆಲ್ಲಾ ಮಾತ್ರೆಗಳು ಬಂದಿದ್ದು ಹೇಗೆ? ಈ ಚಾಲೆಂಜ್ ಹೇಗೆ ಆರಂಭವಾಯ್ತು ಎನ್ನುವ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!