ಸಹಪಾಠಿಗಳ ಪೈಶಾಚಿಕ ಕೃತ್ಯ: ಮದ್ಯ ಸೇವಿಸದಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಹಲ್ಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದ ಲಾಹೋರ್‌ನ ಡಿಫೆನ್ಸ್ ಹೌಸಿಂಗ್ ಅಥಾರಿಟಿ ಪ್ರದೇಶದಲ್ಲಿರುವ ಅಂತರಾಷ್ಟ್ರೀಯ ಶಾಲೆಯೊಂದರಿಂದ ಆಘಾತಕಾರಿ ವಿಡಿಯೋ ಹರಿದಾಡುತ್ತಿದೆ. ಕೆಲವು ಹುಡುಗಿಯರು ಸಹ ಸಹಪಾಠಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ನಾಲ್ವರು ಯುವತಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿವಿಧ ಷರತ್ತುಗಳ ಮೇಲೆ ತಲಾ 50,000 ರೂ.ಗಳ ಶ್ಯೂರಿಟಿಯೊಂದಿಗೆ ಅಲ್ಲಿನ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿದೆ.

ವಿಷಯ ಏನೆಂದರೆ, ಮದ್ಯ ಸೇವಿಸುವ ಅಭ್ಯಾಸವಿರುವ ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗೂ ಮದ್ಯ ಸೇವಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಆಕೆ ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಲಾಗಿದೆ. ಸಂತ್ರಸ್ತೆಯನ್ನು ನೆಲದ ಮೇಲೆ ಎಸೆದು ತಲೆಗೆ ಥಳಿಸಿ ಕಾಲಿನಿಂದ ಒದೆಯುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ತಮಗೆ ಕ್ಷಮೆ ಕೇಳುವಂತೆ ಸಹಪಾಠಿಗಳು ಪದೇ ಪದೇ ಒತ್ತಡ ಹೇರುತ್ತಿರುವುದು ಕಂಡು ಬಂದಿದೆ.

ಲಾಹೋರ್‌ನಲ್ಲಿರುವ ಸ್ಕಾರ್ಸ್‌ಡೇಲ್ ಅಮೇರಿಕನ್ ಇಂಟರ್‌ನ್ಯಾಶನಲ್ ಸ್ಕೂಲ್‌ನಿಂದ ಬಂದ ವೀಡಿಯೊವನ್ನು ಸ್ಥಳೀಯ ಪೊಲೀಸರು ಗುರುತಿಸಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಸದಸ್ಯ ಮಾಹೀನ್ ಫೈಸಲ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಇಂತಹ ಹುಡುಗಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!