ಗಂಡುಮಕ್ಕಳು ಸೇವ್ ಮಾಡೋದು ಕಡಿಮೆ. ಅದಕ್ಕೆ ಹೆಣ್ಮಕ್ಕಳನ್ನು ಗೃಹಲಕ್ಷ್ಮಿ ಅಂತಾರೆ. ಹೆಂಗಸರ ಕಡೆ ದುಡ್ಡ ಕೊಟ್ಟರೆ ಅದನ್ನು ಅವರು ಚೆನ್ನಾಗಿಯೇ ಸೇವ್ ಮಾಡ್ತಾರೆ. ಇದು ಎಲ್ಲರಿಗೂ ಸಾಧ್ಯ ಇಲ್ಲ. ಹುಡುಗಿಯರಿಗೂ ಟ್ರಿಪ್,ಶಾಪಿಂಗ್ ಮನೆ ಡೆಕೋರೆಟ್ ಮಾಡುವ ಆಸೆ ಇರುತ್ತದೆ. ಕೆಲವೊಮ್ಮೆ ತಿಳಿಯದೆ ದುಂದುವೆಚ್ಚ ಮಾಡಿಬಿಡುತ್ತಾರೆ. ಹಾಗಾಗದಂತೆ ತಡೆಯಲು ಇಲ್ಲಿದೆ ಟಿಪ್ಸ್..
- ಗಂಡನ ಸಂಬಳ ನಿಮ್ಮ ಸಂಬಳ ಸೇರಿಸಿ ಎಷ್ಟಾಗುತ್ತದೆ. ಅದನ್ನು ಹೇಗೆ ವ್ಯಯಿಸಬೇಕು ಎಂದು ಲಿಸ್ಟ್ ಮಾಡಿ.
- ಬಾಡಿಗೆ,ಕರೆಂಟ್ ಬಿಲ್,ದಿನಸಿ ಇವೆಲ್ಲವನ್ನೂ ಕಳೆದು ಎಷ್ಟು ಉಳಿಯುತ್ತದೆ ಲೆಕ್ಕ ಹಾಕಿ.
- ಗಂಡನಿಂದ ಸ್ವಲ್ಪ ಹಣ ನಿಮಗೆ ಬೇಕು ಎಂದು ಹೇಳಿ ಪಡೆದುಕೊಳ್ಳಿ. ಇದನ್ನು ಕೂಡ ಸೇವ್ ಮಾಡಬಹುದು.
- ಪಾರದರ್ಶಕತೆ ತುಂಬಾನೇ ಮುಖ್ಯ ಒಂದು ರೂ ಖರ್ಚು ಮಾಡಿದರೂ ಯಾಕೆ ಖರ್ಚಾಗಿದೆ ಎನ್ನುವ ಮಾಹಿತಿ ಇಬ್ಬರಿಗೂ ಇರಲಿ.
- ದಿನಸಿ ಕೊಳ್ಳುವಾಗ ಸೇವಿಂಗ್ಸ್ ಬಗ್ಗೆ ಯೋಚಿಸಿ, ಬೈ ಒನ್ ಗೆಟ್ ಒನ್, ಆಫರ್ಸ್ ನೋಡಿ ಕೊಳ್ಳಿ.
- ಮೊಬೈಲ್ ಇಂಟರ್ನೆಟ್, ಎರಡು ಸಿಮ್,ಟಿವಿ ಡಿಶ್, ನೆಟ್ ಬಿಲ್ ಅಷ್ಟರಲ್ಲಿ ಎಲ್ಲಿ ಕಡಿತಗೊಳಿಸಲು ಸಾಧ್ಯವೋ ಅದನ್ನು ಕಮ್ಮಿ ಮಾಡಿ.
- ಲೋ ಬ್ಯಾಲೆನ್ಸ್ ಮಾಡಿಕೊಳ್ಳಬೇಡಿ. ಪದೇ ಪದೆ ಹೀಗೆ ಮಾಡಿದ್ರೆ ಹಣ ಕಟ್ ಆಗುತ್ತದೆ.
- ಶಾಪಿಂಗ್ ಮಾಡುವುದು ಕಡಿಮೆ ಮಾಡಿ. ತೆಗೆದುಕೊಳ್ಳುವಾಗ ಒಂದು ಕ್ಷಣ ನನಗಿದು ಬೇಕಾ ಎಂದು ಯೋಚಿಸಿ..
- ತಿನ್ನುವಾಗ ದೊಡ್ಡ ಅಂಗಡಿಗಳಿಗೆ ಹೋಗಿ ದೊಡ್ಡ ಬಿಲ್ ಮಾಡಿಕೊಳ್ಳಬೇಡಿ. ಬೇಕಾದ್ದನ್ನು ಮನೆಯಲ್ಲಿ ಮಾಡಿ ತಿನ್ನಿ.
- ಬ್ಯೂಟಿ ಪಾರ್ಲರ್ನಲ್ಲಿ ಉಗುರು ಕತ್ತರಿಸೋದಕ್ಕು ಇನ್ನೂರು ರೂಪಾಯಿ ತೆಗೆದುಕೊಳ್ಳುತ್ತಾರೆ. ಆದಷ್ಟು ಬ್ಯೂಟಿ ಪಾರ್ಲರ್ ಬದಲು ನ್ಯಾಚುರಲ್ ವಸ್ತುಗಳನ್ನು ಮನೆಯಲ್ಲಿಯೇ ಬಳಸಿ.
- ಒಂದು ಬುಕ್ ಇಡಿ. ಅದರ ತುಂಬಾ ಒಂದು ತಿಂಗಳು ಏನೆಲ್ಲಾ ತರುತ್ತೀರಿ ಎಂದು ಬರೆದಿಡಿ. ಮತ್ತೆ ಮುಂದಿನ ತಿಂಗಳು ಅದರಲ್ಲಿ ಏನು ಕಡಿಮೆ ಮಾಡುವುದು ಎಂದು ಗಮನ ಹರಿಸಬಹುದು.