Saturday, August 13, 2022

Latest Posts

ಕಳೆದ ಒಂದುವರೆ ತಿಂಗಳಿನಿಂದ ಇದೇ ಮೊದಲ ಬಾರಿಗೆ ಜಾಗತಿಕವಾಗಿ ಕೋವಿಡ್ ಸೋಂಕು ಹೆಚ್ಚಳ!!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕಳೆದ ಒಂದುವರೆ ತಿಂಗಳಿನಿಂದ ಇದೇ ಮೊದಲ ಬಾರಿಗೆ ಜಾಗತಿಕವಾಗಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಈ ಕುರಿತು ಆತಂಕ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್, ಎಲ್ಲ ದೇಶಗಳು ಕೇವಲ ಕೊರೋನಾ ಲಸಿಕೆ ಮೇಲೆ ಅವಲಂಬಿಸಿದರೆ ತಪ್ಪು ಮಾಡಿದಂತಾಗುತ್ತದೆ. ಕೋವಿಡ್ ಮಾರ್ಗ ಸೂಚಿಯನ್ನು ಪ್ರತಿ ದೇಶವೂ ಪಾಲಿಸಲೇ ಬೇಕು ಎಂದು ಹೇಳಿದ್ದಾರೆ.

ಮೊದಲಿಗೆ ಕೊರೋನಾ ಸೋಂಕು ಹರಡುವುದು ಎಲ್ಲಿಂದ ಎಂದು ಪತ್ತೆ ಮಾಡಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯವೆಂದು ಹೇಳಿದರು.

ಕೊರೋನಾ ಸೋಂಕು ವಿಶ್ವವ್ಯಾಪಿಯಾಗುವುದರ ಜೊತೆಗೆ ಬೇರೆ ಬೇರೆ ರೂಪವನ್ನು ತಾಳಿದೆ, ಇಂತಹ ಸಂದರ್ಭದಲ್ಲಿ ಕೊರೋನಾ ನಿಯಮಗಳನ್ನು ಸಡಿಲಿಕೆ ಮಾಡುವುದು ಸಮಂಜಸವಲ್ಲ ಎಂದು ಆರೋಗ್ಯ ಸಂಸ್ಥೆ ಈ ಹಿಂದೆ ಹೇಳಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss