54 ಪ್ರಯಾಣಿಕರನ್ನು ಬಿಟ್ಟು ಟೇಕಾಫ್​ ಆದ ಗೋ ಫಸ್ಟ್ ವಿಮಾನ: ಏರ್​ಲೈನ್ಸ್​ ಸಿಬ್ಬಂದಿ ಸಸ್ಪೆಂಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ , ಪ್ರಯಾಣಿಕರನ್ನು ಟರ್ಮಿನಲ್​ನಲ್ಲೇ ಬಿಟ್ಟು ವಿಮಾನ ಟೆಕ್ ಆಪ್ ಆದ ಘಟನೆ ವರದಿಯಾದ ಬೆನ್ನಲ್ಲೇ ಏರ್​ಲೈನ್ಸ್​ ಸಿಬ್ಬಂದಿ ಗೆ ಗ್ರಹಚಾರ ಕಾದಿದೆ.

ಪ್ರಯಾಣಿಕರು ಬರುವ ಮುನ್ನವೇ ವಿಮಾನ ಟೇಕ್​ಆಪ್‌ ಆಗಿರುವುದಕ್ಕೆ ಗೋ ಫಸ್ಟ್ ಏರ್ಲೈನ್ಸ್ ಸಂಸ್ಥೆ ತನ್ನ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಿದೆ.

ನಿನ್ನೆ (ಜ.9) ಬೆಳಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದೆಹಲಿಗೆ G8 116 ನಂಬರ್​ನ ಗೋಫಸ್ಟ್ ವಿಮಾನ ಹೊರಟಿತ್ತು. ಮೊದಲನೇ ಟ್ರಿಪ್​​ನಲ್ಲಿ ವಿಮಾನಕ್ಕೆ‌ ಬಸ್​ನಲ್ಲಿ ಹೋಗಿ 50 ಜನ ಪ್ರಯಾಣಿಕರು ಹತ್ತಿದ್ದರು. ಆದ್ರೆ ಎರಡನೇ ಟ್ರಿಪ್​​ನಲ್ಲಿ ಬರುತ್ತಿದ್ದ 54 ಜನ ಪ್ರಯಾಣಿಕರನ್ನು ಬಿಟ್ಟು ವಿಮಾನ ಹಾರಿದೆ.

ಏರ್​ಲೈನ್ಸ್​ ವಿರುದ್ಧ ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ಅಸಮಾಧಾನ ಹೊರ ಹಾಕಿದ್ದಾರೆ.

ಈ ಕುರಿತ ಟ್ವಿಟರ್​ನಲ್ಲಿ ಗೋಫಸ್ಟ್ ಮತ್ತು ಡಿಜಿಸಿಎಗೆ 50 ಕ್ಕೂ ಅಧಿಕ‌ ಪ್ರಯಾಣಿಕರು ಟ್ವೀಟ್​ ಮಾಡಿ ಸಮಯಕ್ಕೆ ಸರಿಯಾಗಿ ಹೋಗಲು ಆಗಿಲ್ಲ ಅಂತ ಬೇಸರ ಹೊರಹಾಕಿದ್ದಾರೆ. ಪ್ರಯಾಣಿಕರು ಆಕ್ರೋಶ ಹೊರ ಹಾಕುತ್ತಿದ್ದಂತೆ ಟ್ವಿಟರ್​ನಲ್ಲಿ ಗೋಫಸ್ಟ್ ಸಂಸ್ಥ ಕ್ಷಮೆ ಕೇಳಿದೆ. ಪ್ರಯಾಣಿಕರ ಮಾಹಿತಿ ಪಡೆದುಕೊಂಡು ಏರ್​ಲೈನ್ಸ್​ ಸಂಸ್ಥೆ ಟ್ವೀಟ್​ ಮಾಡಿ ಕ್ಷಮೆ ಕೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!