ಹೊಸದಿಗಂತ ಆನ್ಲೈನ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿಯಾಗಿದೆ.
ರಾಜ್ಕುಮಾರ್ ಸಮಾಧಿ ರಸ್ತೆ ಬಳಿ ಗುಂಡಿ ತಪ್ಪಿಸಲು ಹೋದ ಬೈಕೊಂದು ಸ್ಕಿಡ್ ಆಗಿದ್ದು, ಮನೋಜ್ ಎಂಬಾತ ಮೃತಪಟ್ಟಿದ್ದಾರೆ.
ಸ್ಕಿಡ್ ಆಗಿ ಬೈಕ್ನಿಂದ ಮನೋಜ್ ಕೆಳಗೆ ಬಿದ್ದಿದ್ದು, ಹಿಂದಿನಿಂದ ಬರುತ್ತಿದ್ದ ವಾಹನ ಡಿಕ್ಕಿಯಾಗಿ ಮನೋಜ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮನೋಜ್ ಮೃತಪಟ್ಟಿದ್ದಾರೆ.