ಗೋವಾ ಕಾಂಗ್ರೆಸ್ ಶಾಸಕರ‌ ಬಿಜೆಪಿ ಸೇರ್ಪಡೆಯನ್ನು ಮನ್ನಿಸಿದ ಸ್ಪೀಕರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಗೋವಾ ರಾಜ್ಯದ 11 ಕಾಂಗ್ರೆಸ್‌ ಶಾಸಕರ ಪೈಕಿ 8 ಮಂದಿ ಶಾಸಕರು ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡ ಒಂದು ದಿನದ ನಂತರ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷವನ್ನು (ಸಿಎಲ್‌ಪಿ) ಆಡಳಿತಾರೂಢ ಬಿಜೆಪಿಗೆ ವಿಲೀನಗೊಳಿಸುವುದನ್ನು ಗೋವಾ ವಿಧಾನಸಭಾ ಸ್ಪೀಕರ್ ರಮೇಶ್ ತಾವಡ್ಕರ್ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಕಾಂಗ್ರೆಸ್ ಶಾಸಕರು ಪತ್ರ ಸಲ್ಲಿಸಿ ತಮ್ಮ ಬಳಿ ಅಗತ್ಯ ಸಂಖ್ಯೆಗಳಿವೆ ಎಂದು ಹೇಳಿಕೊಂಡ ಬಳಿಕ ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಪೀಕರ್ ಹೇಳಿದ್ದಾರೆ. ನಿಯಮಗಳ ಪ್ರಕಾರ ಒಟ್ಟಾರೆ ಶಾಸಕರಲ್ಲಿ ಮೂರನೇ ಎರಡರಷ್ಟು ಶಾಸಕರು ಬಂಡಾಯವೆದ್ದು ಇನ್ನೊಂದು ಬಣ ಸೇರಿದರೆ ಅಂತಹ ಸಂದರ್ಭದಲ್ಲಿ ಪಕ್ಷಾಂತ ನಿಷೇಧ ಕಾಯ್ದೆ ಅನ್ವಯವಾಗುದಿಲ್ಲ. ಪ್ರಸ್ತುತ ಗೋವಾದಲ್ಲಿ 11ರಲ್ಲಿ 8 ಮಂದಿ ಅಂದರೆ ಮುಕ್ಕಾಲು ಭಾಗ ಶಾಸಕರು ಸೇರ್ಪಡೆಗೊಳ್ಳುತ್ತಿರುವುದರಿಂದ ಸ್ಪೀಕರ್‌ ಈ ವಿಲೀನವನ್ನು ಒಪ್ಪಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!