ಕಡಲ ಕಿನಾರೆಗಳ ನಿಗಾಕ್ಕೆ ಗೋವಾ ಸರ್ಕಾರದಿಂದ ಆ್ಯಪ್, ಇದೇನು ಮಾಡುತ್ತೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಗೋವಾ ಸರ್ಕಾರವು ಕಡಲ ಕಿನಾರೆಗಳ ವೀಕ್ಷಣೆಗೆ ನೂತನ ಆ್ಯಪ್ ಬಿಡುಗಡೆ ಮಾಡಿದ್ದು ಈ ಬೀಚ್ ವಿಜಿಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್‌ ಬೀಚ್‌ ಗಳ ಸಮಗ್ರ ನಿರ್ವಹಣೆ ಮಾಡಲು ನೂತನ ಆ್ಯಪ್ ಬಿಡುಗಡೆಗೊಳಿಸಲಾಗಿದ್ದು ಇದು ಟೂರಿಸಂ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ಮತ್ತು ಪ್ರವಾಸಿಗರಿಗೆ ಪ್ರಯೋಜನವನ್ನು ನೀಡುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ.

ಪ್ರವಾಸಿಗರ ರಕ್ಷಣೆ ಮತ್ತು ಸುರಕ್ಷತೆಗೆ ಪೋಲೀಸರು ಹಾಗೂ ಇತರ ಭದ್ರತಾ ಕಾರ್ಯಕರ್ತರಿಗೆ ಈ ಅಪ್ಲಿಕೇಷನ್‌ ಸಹಾಯಕವಾಗಲಿದೆ. ತಮ್ಮ ಸಮಸ್ಯೆಗಳನ್ನು ಹಾಗೂ ದೂರುಗಳನ್ನು ಪ್ರವಾಸಿಗರು ಈ ಆ್ಯಪ್ ಮೂಲಕ ದಾಖಲಿಸಬಹುದಾಗಿದೆ. ಇದರಲ್ಲಿ ಅಕ್ರಮ ವ್ಯಾಪಾರಿಗಳು ಅಕ್ರಮ ಮಸಾಜ್ ಸೇವೆಗಳನ್ನು ವರದಿ ಮಾಡುವುದರಿಂದ ಹಿಡಿದು ಬೀಚ್ ಶುಚಿತ್ವದವರೆಗೆ ಎಲ್ಲ ಆಪ್ಶನ್‌ ಗಳೂ ಇರಲಿದೆ. ಪ್ರವಾಸೋದ್ಯಮದೊಂದಿಗೆ ಮಾಹಿತಿ ತಂತ್ರಜ್ಞಾನದ ಸಹಯೋಗದಲ್ಲಿ ಪ್ರವಾಸಿಗಳ ಹಿತಕಾಪಾಡಲು ಇದು ಸಹಾಯಕವಾಗಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!