ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವರು ಕೊಟ್ಟ ಸಂಪತ್ತು, ಶಕ್ತಿಯನ್ನು ಸಮಾಜಕ್ಕೆ ಅರ್ಪಿಸಿದಾಗ ಮನಸ್ಸಿಗೆ ನೆಮ್ಮದಿ, ಆನಂದ ಲಭಿಸಲು ಸಾಧ್ಯವಿದೆ. ಒಂದು ಕ್ಷೇತ್ರವನ್ನು ಯಾವ ರೀತಿ ಜೀರ್ಣೋದ್ಧಾರ ಮಾಡಿ ಬ್ರಹ್ಮಕಲಶವನ್ನು ಮಾಡಬೇಕು ಎಂಬುದನ್ನು ಸೇರಿದ ಪ್ರತಿಯೊಬ್ಬರೂ ಚಿಂತಿಸಬೇಕು. ಊರಿನ ಜನರ ಒಗ್ಗಟ್ಟಿನ ಪರಿಶ್ರಮ, ಭಕ್ತಿಯ ಸಿಂಚನ ದೇವತಾಕಾರ್ಯದಲ್ಲಿ ಕಂಡುಬರಬೇಕು ಎಂದು ಉದ್ಯಮಿ, ಧಾರ್ಮಿಕ ಮುಂದಾಳು ಮಧುಸೂಧನ ಅಯ್ಯರ್ ಮಂಗಳೂರು ಹೇಳಿದರು.
ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಬುಧವಾರ ಜರಗಿದ ಪಾದುಕಾನ್ಯಾಸ ಕಾರ್ಯಕ್ರಮದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದಿಯಡ್ಕ ಗ್ರಾಮ ಪಂಚಾಯಿತಿ ಜನಪ್ರತಿನಿಧಿ ಶ್ಯಾಮಪ್ರಸಾದ್ ಮಾನ್ಯ ಅಧ್ಯಕ್ಷತೆಯನ್ನು ವಹಿಸಿದ್ದರು. ಲ್ಲಿ ಮಂಗಳೂರು ಹಾರ್ಟಿಕಲ್ಚರ್ ಡಿಪಾರ್ಟ್ಮೆಂಟಿನ ನಿವೃತ್ತ ಮ್ಯಾನೇಜರ್ ಚಂದ್ರಶೇಖರ, ವೇದಮೂರ್ತಿ ಗಣೇಶ್ ಭಟ್ ಮುಂಡೋಡು, ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಸೇವಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಪೆರಡಾಲ ದೇವಸ್ಥಾನದ ಟ್ರಸ್ಟಿ ಜಗನ್ನಾಥ ರೈ ಮೊದಲಾದವರು ಭಾಗವಹಿಸಿದ್ದರು. ವಿಜಯ್ ಕುಮಾರ್ ಮಾನ್ಯ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.