ಅವಲಕ್ಕಿ ಹೆಸರು ಕೇಳಿದರೇನೇ ಬಾಯಲ್ಲಿ ನೀರು ಬರುತ್ತದೆ. ಅದರಲ್ಲೂ ಗೊಜ್ಜವಲಕ್ಕಿ ಎಲ್ಲರ ಫೇವರೆಟ್. ಇದನ್ನು ಮಾಡೋದು ತುಂಬಾನೇ ಸುಲಭ. ಒಂದೇ ರೀತಿ ಅವಲಕ್ಕಿ ತಿಂದು ಬೋರಾಗಿದ್ದರೆ ಈ ರೀತಿ ಮಾಡಿ ನೋಡಿ.. ಈಸಿಯಾದ ಗೊಜ್ಜವಲಕ್ಕಿ ರೆಸಿಪಿ ಇಲ್ಲಿದೆ..
ಮಾಡುವ ವಿಧಾನ
- ಮೊದಲಿಗೆ ಒಂದು ಸ್ಪೂನ್ ಹುಣಸೆರಸ,ಒಂದು ಸ್ಪೂನ್ ಬೆಲ್ಲ ಮಿಕ್ಸ್ ಮಾಡಿ.
- ಈ ಮಿಶ್ರಣಕ್ಕೆ ಒಂದು ಸ್ಪೂನ್ ಪುಳಿಯೊಗರೆ ಪುಡಿ,ಒಂದು ಸ್ಪೂನ್ ಉಪ್ಪು ಹಾಕಿ.
- ಮಿಕ್ಸ್ ಮಾಡಿ ನೀರು ಹಾಕಿ ಎತ್ತಿಡಿ.
- ನಂತರ ದಪ್ಪ ಅವಲಕ್ಕಿ ಹಾಕಿ ಮಿಕ್ಸಿ ಮಾಡಿ.
- ನಂತರ ಈ ಮಿಶ್ರಣವನ್ನು ಗೊಜ್ಜಿಗೆ ಬೆರೆಸಿ.
- ನಂತರ ಹತ್ತು ನಿಮಿಷ ಹಾಗೆ ಬಿಟ್ಟುಬಿಡಿ.
- ಇನ್ನೊಂದು ಪ್ಯಾನ್ಗೆ ಎಣ್ಣೆ ಸಾಸಿವೆ. ಕಡ್ಲೆಬೇಳೆ,ಹಸಿಮೆಣಸು,ಶೇಂಗಾ ಹಾಕಿ.
- ನಂತರ ಗೊಜ್ಜಿನ ಪುಡಿ ಹಾಕಿ.
- ಐದು ನಿಮಿಷ ಬಿಸಿಮಾಡಿ. ಮೇಲೆ ಕಾಯಿತುರಿ ಹಾಕಿ ತಿಂದರೆ ಗೊಜ್ಜವಲಕ್ಕಿ ರೆಡಿ.