ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದವರೆಗೂ ಕಡಿಮೆಯಾಗುತ್ತಿದ್ದ ಚಿನ್ನದ ಬೆಲೆ, ಹಬ್ಬದ ನಂತರ ಗಗನಕ್ಕೇರುತ್ತಿದೆ. ಶುಕ್ರವಾರವೂ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಶನಿವಾರ ಭಾರಿ ಏರಿಕೆ ಕಂಡಿದೆ. ಶನಿವಾರ ದೇಶದ ಮಾರುಕಟ್ಟೆಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ 600ರೂ, 10 ಗ್ರಾಂ 24 ಕ್ಯಾರೆಟ್ ಚಿನ್ನ ರೂ. 650 ಏರಿಕೆಯಾಗಿದೆ.
ಬೆಳ್ಳಿ ಬೆಲೆಯೂ ದಿಢೀರ್ ಏರಿಕೆಯಾಗಿದೆ. ಶನಿವಾರ ಪ್ರತಿ ಕೆಜಿ ಬೆಳ್ಳಿಗೆ ರೂ. 1500 ಏರಿಕೆಯಾಗಿದೆ. ಇದರಿಂದಾಗಿ ನಾಲ್ಕು ದಿನಗಳಲ್ಲೇ ಸುಮಾರು ರೂ. 4100 ಏರಿಕೆಯಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ.
- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 56,700 ಆಗಿದ್ದರೆ 10 ಗ್ರಾಂ 24 ಕ್ಯಾರೆಟ್ ಚಿನ್ನ 61,840ರೂಗೆ ಏರಿಕೆಯಾಗಿದೆ.
- ಮುಂಬೈ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 56,550 ಆಗಿದ್ದರೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 61,690 ತಲುಪಿದೆ.
- ಚೆನ್ನೈನಲ್ಲಿ 10 ಗ್ರಾಂ 22ಕ್ಯಾರೆಟ್ ಚಿನ್ನ 57,000 ರೂ., 24ಕ್ಯಾರೆಟ್ ಚಿನ್ನ 62,180 ರೂ.ಗೆ ತಲುಪಿದೆ.
ಬೆಳ್ಳಿ ಬೆಲೆಯಲ್ಲಿ ಏರಿಕೆ..
- ಚೆನ್ನೈನಲ್ಲಿ ಒಂದು ಕಿಲೋ ಬೆಳ್ಳಿಯ ಬೆಲೆ ರೂ. 79,500.
- ಮುಂಬೈ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಒಂದು ಕಿಲೋ ಬೆಳ್ಳಿ ರೂ.76,500 ತಲುಪಿದೆ.
- ಬೆಂಗಳೂರಿನಲ್ಲಿ ಒಂದು ಕಿಲೋ ಬೆಳ್ಳಿ 75,500 ರೂ.ಗೆ ತಲುಪಿದೆ.