ಹೊಸ ದಿಗಂತ ಆನ್ ಲೈನ್ ಡೆಸ್ಕ್:
ನಿಮ್ಮ ಪ್ರೀತಿಪಾತ್ರರಿಗೆ ಚಿನ್ನ ಖರೀದಿ ಮಾಡುವ ಆಸೆಯಲ್ಲಿದ್ದರೆ ಇಂದು ಖರೀದಿಸಬಹದು. ಏಕೆಂದರೆ ಚಿನ್ನದ ಬೆಲೆ ಇಳಿಕೆಯಾಗಿದೆ. ಶುಕ್ರವಾರ ಬೆಳಗಿನ ವೇಳೆಗೆ 10 ಗ್ರಾಂ ಚಿನ್ನಕ್ಕೆ 60 ರೂಪಾಯಿ ಇಳಿದಿದೆ.
ದೇಶದಲ್ಲಿ ಗುರವಾರ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,360 ರೂ. ಇತ್ತು. ಇಂದು 45,300 ರೂ.ಗೆ ಇಳಿದಿದೆ.
ಹಾಗೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆ ಕಂಡಿದೆ. 46,300 ರೂಪಾಯಿ ದಾಖಲಾಗಿದೆ.
ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು 47,560 ರೂ. ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನ 43,600 ರೂ ಆಗಿದೆ.
ಬೆಳ್ಳಿ ಬೆಲೆ:
ಇಂದು 1 ಕೆ.ಜಿ. ಬೆಳ್ಳಿಗೆ 300 ರೂಪಾಯಿ ಕಡಿಮೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 60,900 ರೂ.ಗೆ ಏರಿಕೆಯಾಗಿತ್ತು. ಇಂದು 60,600 ರೂ.ಗೆ ಇಳಿಕೆಯಾಗಿದೆ.