Sunday, April 18, 2021

Latest Posts

ಚಾಲಾಕಿ ಸರಗಳ್ಳರಿಬ್ಬರ ಬಂಧನ: ಚಿನ್ನಾಭರಣ ವಶಕ್ಕೆ

ಹೊಸ ದಿಗಂತ ವರದಿ, ಕೃಷ್ಣರಾಜಪೇಟೆ:

ಪಟ್ಟಣದ ಜಯನಗರ ಬಡಾವಣೆಯಲ್ಲಿ ಬೆಳಿಗ್ಗೆ 6.30ರ ಸಮಯದಲ್ಲಿ ಮನೆಯ ಮುಂಭಾಗದಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಯ
ಕುತ್ತಿಗೆಯಲ್ಲಿ ಹಾಕಿದ್ದ ಚಿನ್ನದ ಸರವನ್ನು ಬೈಕಿನಲ್ಲಿ ಬಂದು ಕಿತ್ತು ಬೈಕಿನಲ್ಲಿ ಪರಾರಿಯಾಗಿದ್ದ ಇಬ್ಬರು ಚಾಲಾಕಿ ಸರಕಳ್ಳರನ್ನು ಕೆ.ಆರ್.ಪೇಟೆ ಪೋಲಿಸರು ಮಾಲು ಸಮೇತ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪಟ್ಟಣದ ವೇರ್ ಹೌಸ್ ಮುಂಭಾಗದ ರಸ್ತೆಯಲ್ಲಿರುವ ಡಿ.ರಮೇಶ್ ಅವರ ಪತ್ನಿ ಅರುಣಾ ಮನೆಯ ಮುಂಭಾಗದಲ್ಲಿ ಕಸವನ್ನು ಗುಡಿಸುತ್ತಿದ್ದಾಗ ಒಚಿಟಿ ಮಹಿಳೆಯನ್ನು ಗಮನಿಸಿದ ದುಷ್ಕರ್ಮಿಗಳು ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಕೆ.ದೀಪಕ್ ಅವರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆ ನಡೆಸಿದ ಕೆ.ಆರ್.ಪೇಟೆ ವೃತ್ತದ ಪೋಲಿಸರು 60ಗ್ರಾಂ ತೂಕದ 02 ಲಕ್ಷರೂಪಾು ಮೌಲ್ಯದ ಚಿನ್ನದ ಮಾಂಗಲ್ಯದ ಸರ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಹೀರೋಹೋಂಡ ಸ್ಪ್ಲೆಂಡರ್ ಮೋಟಾರ್‌ಬೈಕ್ ಹಾಗೂ ಕಳ್ಳತನ ಮಾಡಿ ತಮ್ಮ ಬಳಿ ಇಟ್ಟುಕೊಂಡಿದ್ದ ಎರಡು ಮೋಟಾರ್ ಬೈಕುಗಳ ಸಮೇತ ಆರೋಪಿಗಳಾದ ಹಾಸನದ ನಂದಿನಿ ಲೇಔಟ್ ವಾಸಿ ಮದನ್ ಅವರ ಪುತ್ರ ಕಾರು ಚಾಲಕ ವೃತ್ತಿ ಮಾಡುತ್ತಿದ್ದ ಚೇತನ್(27) ಮತ್ತು ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮ ಪಂಚಾುತಿ ವ್ಯಾಪ್ತಿಯ ಕುರ್ನೇನಹಳ್ಳಿಯ ದೇವರಾಜು ಅವರ ಪುತ್ರ ಕಾರು ಚಾಲಕ ಕೆ.ಡಿ.ಪ್ರದೀಪ(33) ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss