Tuesday, August 16, 2022

Latest Posts

ಕುಸ್ತಿ ಟೂರ್ನಿಯಲ್ಲಿ ಚಿನ್ನದ ಪದಕ: Ranking ನಲ್ಲಿ ಅಗ್ರಸ್ಥಾನಕ್ಕೇರಿದ ವಿನೇಶಾ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತದ ವಿನೇಶಾ ಪೋಗಟ್‌ ಎರಡು ವಾರಗಳ ಅಂತರದಲ್ಲಿ ಎರಡನೇ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಮೂಲಕವಿಶ್ವ ಕ್ರಮಾಂಕದಲ್ಲಿ 53 ಕೆಜಿ ವಿಭಾಗದಲ್ಲಿ ಅಗ್ರಸ್ಥಾನಕ್ಕೆ ಮರಳಿದರು.
ರೋಮ್ ನಲ್ಲಿನಡೆಯುತ್ತಿರುವ ಮಾಟಿಯೊ ಪೆಲಿಕೋನ್ ರ‍್ಯಾಂಕಿಂಗ್ ಸಿರೀಸ್‌ ಕುಸ್ತಿ ಟೂರ್ನಿಯಲ್ಲಿ ಅವರು ಮೊದಲ ಸ್ಥಾನ ಗಳಿಸಿದರು. ಇಲ್ಲಿ ಅವರು 53 ಕೆಜಿ ವಿಭಾಗದ ಫೈನಲ್‌ ಬೌಟ್‌ನಲ್ಲಿ 4-0ರಿಂದ ಕೆನಡಾದ ಮೇರಿ ಹೆಲನ್‌ ವಿಕ್ಕರ್‌ ಅವರನ್ನು ಮಣಿಸಿದರು.ಈ ಮೂಲಕ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಭಾರತದ ಏಕೈಕ ಮಹಿಳಾ ಕುಸ್ತಿಪಟು ಎನಿಸಿಕೊಂಡಿದ್ದಾರೆ.
ಕಳೆದ ವಾರ ಉಕ್ರೇನ್‌ ಕೀವ್‌ನಲ್ಲಿ ನಡೆದ ಟೂರ್ನಿಯಲ್ಲೂ ಅವರಿಗೆ ಚಿನ್ನದ ಪದಕ ಒಲಿದಿತ್ತು.
ರೋಮ್‌ ಟೂರ್ನಿಗೂ ಮೊದಲು ವಿನೇಶಾ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದರು. ಇಲ್ಲಿ 14 ಪಾಯಿಂಟ್ಸ್ ಕಲೆಹಾಕುವ ಮೂಲಕ ಅಗ್ರಸ್ಥಾನಕ್ಕೆ ಮರಳಿದರು. ಕೆನಡಾದ ಮೇರಿ ಅವರು ಎರಡನೇ ಸ್ಥಾನದಲ್ಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss