Monday, July 4, 2022

Latest Posts

ಅಕ್ರಮವಾಗಿ ಚಿನ್ನ ಸಾಗಾಟ: ರೂ.16.79 ಲಕ್ಷ ಮೊತ್ತದ ಚಿನ್ನ ವಶ

ದಿಗಂತ ವರದಿ ಮಂಗಳೂರು:

ತೆರಿಗೆ ವಂಚಿಸಿ ಅಕ್ರಮವಾಗಿ ವಿಮಾನದ ಮೂಲಕ ರೂ.16,79,860 ಮೊತ್ತದ ಚಿನ್ನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕಾಸರಗೋಡಿನ ವ್ಯಕ್ತಿಯೊಬ್ನ ಶಾರ್ಜಾದಿಂದ 16,79,860 ರೂ . ಮೌಲ್ಯದ 24 ಕ್ಯಾರೆಟ್‌ನ 338 ಗ್ರಾಂ ಚಿನ್ನವನ್ನು ಸಾಗಾಟ ಮಾಡುತ್ತಿದ್ದ. ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಆರೋಪಿ ಸ್ಟಿರಿಯೋ ಕೇಬಲ್ , ಬರ್ನರ್ ಸ್ಟ್ಯಾಂಡ್ , ಕ್ಯಾಂಡಲ್ ಹೋಲ್ಡರ್ ಸ್ಟ್ಯಾಂಡ್‌ಗಳಲ್ಲಿಟ್ಟು ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss