ಡಾ.ಸೂರಿರಾಜುಗೆ ಗೋಲ್ಡನ್ ಬುಕ್ ಪುರಸ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ನಗರದ ಹೆಸರಾಂತ ವೈದ್ಯ ಡಾ.ವಿ. ಸೂರಿರಾಜು ಅವರು ಬರೆದಿರುವ ‘ಕಿಡ್ನಿ ಸೀಕ್ರೆಟ್ಸ್ ರಿವೀಲ್ಡ್’ ಕೃತಿಯು 2022ನೇ ಸಾಲಿನ ಪ್ರತಿಷ್ಠಿತ ‘ಗೋಲ್ಡನ್ ಬುಕ್’ ಪುರಸ್ಕಾರಕ್ಕೆ ಪಾತ್ರವಾಗಿದೆ.

ಭಾರತದ ಅತ್ಯುತ್ತಮ ಲೇಖಕರಿಗೆ ಕೊಡಲ್ಪಡುವ ಪುರಸ್ಕಾರಕ್ಕೆ ಪಾತ್ರವಾಗಿರುವ ಈ ಪುಸ್ತಕವು ಸಾಮಾನ್ಯ ಜನರಿಗೆ ಮೂತ್ರಪಿಂಡಗಳ ಬಗ್ಗೆ ಸರಳವಾದ ಭಾಷೆಯಲ್ಲಿ ಅರಿವು ಮೂಡಿಸುವಂತಿರುವುದನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗೆ ಪ್ರಪಂಚದ ನಾನಾ ಭಾಗಗಳಿಂದ ಒಟ್ಟು 5 ಸಾವಿರಕ್ಕೂ ಹೆಚ್ಚು ಕೃತಿಗಳು ಬಂದಿದ್ದವು. ಇವುಗಳಲ್ಲಿ ಡಾ. ಸೂರಿರಾಜು ಅವರ ಕೃತಿಯೂ ಸೇರಿದಂತೆ ಆಯ್ದ 35 ಪುಸ್ತಕಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಅಂತಾರಾಷ್ಟ್ರೀಯ ಖ್ಯಾತಿಯ ಮುರಳಿ ಸುಂದರಂ (ಸಂಸ್ಥಾಪಕರು, ಟಿಎಲ್ಸಿ), ಕೈಲಾಶ್ ಪಿಂಜಾನಿ (ಅಧ್ಯಕ್ಷರು, ಇಂಡಿಯನ್ ಆಥರ್ಸ್ ಅಸೋಸಿಯೇಷನ್ ಮತ್ತು ಡಾ.ದೀಪಕ್ ಪ್ರಭಾತ್ (ಸಂಸ್ಥಾಪಕರು, ಸೂಪರ್ ಫಾಸ್ಟ್ ಆಥರ್) ತೀರ್ಪುಗಾರರಾಗಿದ್ದ ಮಂಡಲಿಯು ಅಂತಿಮವಾಗಿ ಸೂರಿರಾಜು ಅವರ ಕೃತಿಯನ್ನು ಆಯ್ಕೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!