ಹೊಸದಿಗಂತ ಆನ್ಲೈನ್ ಡೆಸ್ಕ್:
ಐಷಾರಾಮಿ ರೈಲು ಗೋಲ್ಡನ್ ಚಾರಿಯಟ್ ಪುನರಾರಂಭಿಸಲು ಭಾರತೀಯ ರೈಲ್ವೆಯ ಐಆರ್ಸಿಟಿಸಿ ವಿಭಾಗ ನಿರ್ಧರಿಸಿದೆ.
ಗೋಲ್ಡನ್ ಚಾರಿಯಟ್ನ ಖುತುವಿನ ಮೊದಲ ಪಯಣ ಇದೇ 14 ರಂದು ಆರಂಭವಾಗಲಿದೆ.
ಆರು ರಾತ್ರಿ ಮತ್ತು ಏಳು ದಿನಗಳ ಈ ಪಯಣವು ಬೆಂಗಳೂರಿನಿಂದ ಆರಂಭವಾಗಲಿದೆ. ಬಂಡೀಪುರ, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಹಂಪಿ, ಐಹೊಳೆ, ಪಟ್ಟದಕಲ್ ಮತ್ತು ಗೋವಾ ಸಂದರ್ಶನದ ಬಳಿಕ ಬೆಂಗಳೂರಿಗೆ ಮರಳಲಿದೆ. ಮೂರು ರಾತ್ರಿ ಮತ್ತು ನಾಲ್ಕು ದಿನಗಳ ಪ್ರವಾಸದ ಇನ್ನೊಂದು ರೈಲು ಇದೇ 21ರಂದು ಬೆಂಗಳೂರಿನಿಂದ ಹೊರಡಲಿದೆ. ಮೈಸೂರು, ಹಂಪಿ ಮತ್ತು ಮಹಾಬಲಿಪುರಂ ಸಂದರ್ಶಿಸುವ ರೈಲು ಬಳಿಕ ಬೆಂಗಳೂರಿಗೆ ಮರಳಲಿದೆ ಎಂದು ಐಆರ್ಸಿಟಿಸಿ ತಿಳಿಸಿದೆ.