spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, January 17, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗೋಣಿಕೊಪ್ಪ| ಕೀರೆಹೊಳೆ-ಕೈತೋಡು ಒತ್ತುವರಿ ತೆರವು ಕಾರ್ಯಾಚರಣೆ ಆರಂಭ

- Advertisement -Nitte

ಹೊಸ ದಿಗಂತ ವರದಿ, ಗೋಣಿಕೊಪ್ಪ:

ಹಲವಾರು ವರ್ಷಗಳಿಂದ ಗೋಣಿಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದ್ದ ಕೀರೆಹೊಳೆ ಮತ್ತು ಗೋಣಿಕೊಪ್ಪ ಕೈತೋಡಿನ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ತಹಶೀಲ್ದಾರ್ ಯೋಗಾನಂದ ಅವರ ನೇತೃತ್ವದಲ್ಲಿ ಶಮಿವಾರ ಚಾಲನೆ ನೀಡಲಾಯಿತು.
ಶನಿವಾರ ಬೆಳಗಿನಿಂದಲೇ ಬೆಳಗಿನಿಂದಲೇ ತಹಶೀಲ್ದಾರ್ ಮಾರ್ಗದರ್ಶನದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗುವುದರೊಂದಿಗೆ,ಬೈಪಾಸ್ ರಸ್ತೆಯ ಮೂಲಕ ಹಾದುಹೋಗುವ ಕೀರೆಹೊಳೆಯ ಬದಿಗಳನ್ನು 4 ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸುವ ಕಾರ್ಯ ನಡೆಯಿತು.
ಹಲವು ವರ್ಷಗಳಿಂದ ಕೀರೆಹೊಳೆ ಮತ್ತು ಕೈತೋಡುವಿನ ಬದಿಗಳಲ್ಲಿ ಅಕ್ರಮವಾಗಿ ಮನೆ ಹಾಗೂ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟವರಿಗೆ ನೋಟೀಸು ನೀಡಿ ತೆರವುಗೊಳಿಸುವಂತೆ ತಿಳಿಸಿದರೂ ಪ್ರಯತ್ನ ಸಫಲತೆಯನ್ನು ಕಂಡುಕೊಂಡಿರಲಿಲ್ಲ.
ಎರಡು ತಿಂಗಳ ಹಿಂದೆ 26ಅತಿಕ್ರಮಣಕಾರರಿಗೆ ಕಾರಣ ಕೇಳಿ ತಹಶೀಲ್ದಾರರು ನೋಟಿಸು ನೀಡಿದ್ದರು. ಕಳೆದ ವಾರ ಎಲ್ಲರನ್ನೂ ಕರೆದು ಅವರ ಆಕ್ಷೇಪ ಕೇಳಿ ಮುಂದಿನ ದಿನಗಳಲ್ಲಿ ಮತ್ತೊಂದು ಸರ್ವೆ ಮಾಡಿ ಈ ಬಗ್ಗೆ ಕಾರ್ಯ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದರು.
ಹಲವು ವರ್ಷಗಳ ಹಿಂದೆ ಕೀರೆಹೊಳೆ ಮತ್ತು ಕೈತೋಡು ಹರಿದು ಹೋಗುವ ಮಾರ್ಗದ ನಕ್ಷೆಯಂತೆ ತೆರವು ಕಾರ್ಯ ಪ್ರಾರಂಭಗೊಂಡಿದೆ ಎಂದು ತಹಶೀಲ್ದಾರ್ ಯೋಗಾನಂದ ಅವರು ಈ ಸಂದರ್ಭ ಮಾಹಿತಿ ನೀಡಿದರು.
ಪೊಲೀಸರ ಬಿಗಿ ಬಂದೋಬಸ್ತ್’ನೊಂದಿಗೆ ತೆರವು ಕಾರ್ಯ ನಡೆಯಿತು. ಖುದ್ದು ತಹಶೀಲ್ದಾರ್ ಅವರೇ ಸ್ಥಳದಲ್ಲಿದ್ದು, ತೆರವು ಕಾರ್ಯದಲ್ಲಿ ಮಗ್ನರಾಗಿದ್ದರು. ಈ ಸಂದರ್ಭ ವೀರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ಜಯಕುಮಾರ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ, ಗೋಣಿಕೊಪ್ಪ ಉಪನಿರೀಕ್ಷಕ ಸುಬ್ಬಯ್ಯ, ಭೂ ಕಂದಾಯ ಇಲಾಖೆಯ ಉಪ ನಿರ್ದೇಶಕ ಮಹೇಶ್, ವೀರಾಜಪೇಟೆ ಸರ್ವೆ ಅಧೀಕ್ಷಕ ಅರುಣ್, ಗೋಣಿಕೊಪ್ಪ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ತಿಮ್ಮಯ್ಯ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss