Monday, August 8, 2022

Latest Posts

ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಅವರಿಂದ ಉತ್ತಮ ಆಡಳಿತ: ಅಶ್ವಥ ನಾರಾಯಣ

ಹೊಸದಿಗಂತ ವರದಿ, ಕಲಬುರಗಿ:

ಕೇಂದ್ರ ಸರ್ಕಾರವೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆರಿಗೆಯರಿಗೆ ಗೌರವ ಧನ ನೀಡುವ ಮೂಲಕ ಹಾಗೂ ರಾಜ್ಯ ಸರ್ಕಾರವೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಗೆ 31 ಸಾವಿರ ಕೋಟಿ ಹಣ ನೀಡುವ ಮೂಲಕ ಬಿಜೆಪಿ ಪಕ್ಷವು ದೇಶದಲ್ಲಿ ಮತ್ತು ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ ನಾರಾಯಣ ಹೇಳಿದ್ದಾರೆ.
ಅವರು ಶನಿವಾರ ಮಹಾನಗರ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪ್ರತಿ ಬಾರಿ ರಾಜ್ಯ ಸರ್ಕಾರವೂ ನೀರಾವರಿ ಸೇರಿದಂತೆ ಇನ್ನೀತರ ಇಲಾಖೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದೆ,ಆದರೆ ಈ ಬಾರಿ ಮುಖ್ಯಮಂತ್ರಿಯವರು ಮಹಿಳಾ ದಿನಾಚರಣೆ ದಿನವೇ ರಾಜ್ಯದ ಬಜೆಟ್ ಮಂಡನೆ ಮಾಡುವ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಅನೂಕುಲ ಮಾಡಿಕೊಟ್ಟಿದ್ದಾರೆ ಎಂದರು.
ದೇಶದ ಜನರು ಬಿಜೆಪಿ ಪಕ್ಷದ ಮೇಲೆ ನಿರೀಕ್ಷೆ ಮಾಡಿ ಅಧಿಕಾರ ನೀಡಿದ್ದು, ನೀರಿಕ್ಷೆಯಂತೆಯೇ ಕೇಂದ್ರದಲ್ಲಿ ಮೋದಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾತ್ರ ನಮ್ಮಿಂದ ಆಗಬೇಕಿದೆ. ಗುಲಾಮಗಿರಿಯ ಸಂಕೇತವಾದ ಹೈದ್ರಾಬಾದ್ ಕರ್ನಾಟಕ ಹೆಸರನ್ನು ತೆಗೆದು ಕಲ್ಯಾಣ ಕರ್ನಾಟಕ ಎಂಬ ಮರು ನಾಮಕರಣ ಮಾಡಿ, ಈ ಆರಿ ಬಜೆಟ್ ನಲ್ಲಿ 1500 ಕೋಟಿ ಹಣವನ್ನು ಈ ಭಾಗಕ್ಕೆ ಯಡಿಯೂರಪ್ಪ ನೀಡಿದ್ದಾರೆ ಎಂದರು.
ಮಹಿಳಾ ಮೋರ್ಚಾದ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ ಮಾತನಾಡಿ, ಪಕ್ಷವೆಂದರೆ ವ್ಯಕ್ತಿ ಪರವಾಗಿ ಇರಬಾರದು. ಸಂಘಟನೆ ಪರವಾಗಿರಬೇಕು. ರಾಜ್ಯ ಸರ್ಕಾರದ ನಿರ್ದೇಶನದಂತೆ ಮಹಿಳೆಯರು ಜಿಲ್ಲಾ ಸ್ಥರದಲ್ಲಿ ಕೆಲಸ ಮಾಡಬೇಕಾಗಿದೆ. ಜಿಲ್ಲಾ ಮಟ್ಟದಲ್ಲಿ ಮಹಿಳೆಯರಿಗೆ ಸಂಪರ್ಕ ಮಾಡಿ ಸಮಾಜಮುಖಿ ಕೆಲಸವಾಗಬೇಕು ಎಂದರು. ಸವಿತಾ ಪಾಟೀಲ ಸ್ವಾಗತ ಗೀತೆಯನ್ನು ಹಾಡಿದರು. ಸುವರ್ಣ ವಾಡೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶಶಿಕಲಾ ಟೆಂಗಳಿ, ಮಹಿಳಾ ರಾಜ್ಯ ಉಪಾಧ್ಯಕ್ಷೆ ಲಲಿತಾ, ಪ್ರಧಾನ ಕಾರ್ಯದರ್ಶಿ ಶಿಲ್ಪಾ, ಶೋಭಾ, ಚಂದಮ್ಮ, ನಗರ ಅಧ್ಯಕ್ಷ ಸಿದ್ದಾಜೀ ಪಾಟೀಲ, ಸುರಜ ತಿವಾರಿ, ಮಹಾದೇವ ಬೆಳಮಗಿ, ವಿಜಯಲಕ್ಷ್ಮಿ ಗೊಬ್ಬುರಕರ್, ಸೇರಿದಂತೆ ಅನೇಕ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss