ಹೊಸ ದಿಗಂತ ವರದಿ, ಬಳ್ಳಾರಿ:
ಕನ್ನಡ ರಾಜ್ಯೋತ್ಸವ ನಿಮಿತ್ತ ಪ್ರತಿ ವರ್ಷ ಸರ್ಕಾರ ನೀಡಲಾಗುತ್ತಿರುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ನಾಲ್ವರು ಸಾಧಕರು ಭಾಜನರಾಗಿದ್ದಾರೆ.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅವರು ರಾಜ್ಯದ 66 ಸಾಧಕರ ಹೆಸರನ್ನು ಪ್ರಕಟಿಸಿದ್ದು, ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇದರ ಸ್ಮರಣೆಗಾಗಿ ಸರ್ಕಾರ ರಾಜ್ಯದ ನಾನಾ ಭಾಗದ 10 ಸಂಘ ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ ನೀಡುತ್ತಿರುವುದು ವಿಶೇಷವಾಗಿದೆ.
ಪ್ರಶಸ್ತಿ ಗರಿ: ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯ ಡಾ.ಬಿ.ಅಂಬಣ್ಣ, ಗಣಿನಾಡು ಬಳ್ಳಾರಿ ಜಿಲ್ಲೆಯ ರಂಗಭೂಮಿ ಕಲಾವಿಧ ರಮೇಶ್ ಗೌಡ ಪಾಟೀಲ್, ಜಾನಪದ ಕ್ಷೇತ್ರದಲ್ಲಿ ಕಂಪ್ಲಿಯ ದುರ್ಗಪ್ಪ ಚೆನ್ನದಾಸರ್, ಸಂಕೀರ್ಣ ದಲ್ಲಿ ಕ್ಯಾಪ್ಟನ್ ರಾಜಾರಾವ್ ಅವರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಿಲ್ಲೆಯ ನಾಗರಿಕರು, ಸಾಹಿತಿಗಳು, ಕಲಾವಿಧರು, ಚುನಾಯಿತ ವಿವಿಧ ಜನಪ್ರತಿನಿಧಿಗಳು, ಗಣ್ಯರು ಪ್ರಶಸ್ತಿಗೆ ಭಾಜನರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.